ಶುಕ್ರವಾರ, ಡಿಸೆಂಬರ್ 2, 2022
20 °C

‘ನೀರವಂ’ಗೆ ನ. 25ರಂದು ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 6 ವರ್ಷಗಳ ಒಳಗಿನ ಮಕ್ಕಳಿಗೆ ಉಚಿತವಾಗಿ ಶ್ರವಣ ಸಾಧನ ಒದಗಿಸುವ ಯೋಜನೆ ‘ನೀರವಂ’ಗೆ ನ. 25ರಂದು ಚಾಲನೆ ದೊರೆಯಲಿದೆ. 

ರೋಟರಿ ಜಿಲ್ಲೆ 3190ರ (ಬೆಂಗಳೂರು ದಕ್ಷಿಣ) ವತಿಯಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಬನಶಂಕರಿ ಎರಡನೇ ಹಂತದಲ್ಲಿರುವ ಮೆಂಟ್‌ ಆಸ್ಪತ್ರೆಯ ಸಭಾಂಗಣದಲ್ಲಿ ಈ ಯೋಜನೆಯ ಉದ್ಘಾಟನೆ ನಡೆಯಲಿದೆ. 

ಸುವರ್ಣ ಆರೋಗ್ಯ ಸೇವಾ ಟ್ರಸ್ಟ್‌, ಅಂಗವಿಕಲರಿಗೆ ಅಗತ್ಯ ಸಲಕರಣೆಗಳ ಖರೀದಿಗೆ ನೀಡುವ ಸಹಾಯಧನ (ಎಡಿಐಪಿ) ಯೋಜನೆಯ ನೆರವಿನೊಂದಿಗೆ ‘ನೀರವಂ’ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕ್ಲಬ್‌ ಪ್ರಕಟಣೆ ಹೇಳಿದೆ. 

ರೋಟರಿ ಜಿಲ್ಲಾ ಗವರ್ನರ್‌ ಜಿತೇಂದ್ರ ಅನೇಜಾ ಅವರು ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲಾ ಚುನಾಯಿತ ಗವರ್ನರ್‌ ಉದಯಕುಮಾರ್‌ ಭಾಸ್ಕರ ಅವರು ಈ ಯೋಜನೆಯ ಸಲಹೆಗಾರರಾಗಿದ್ದಾರೆ. ಮೆಂಟ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರದೀಪ್‌ ಕುಮಾರ್‌, ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ.ಶ್ರೇಯಸ್‌ ಪಿ. ಪ್ರದೀಪ್‌, ನೀರವಂ ರಾಯಭಾರಿಗಳಾದ ಪ್ರಜ್ವಲ್‌ ದೇವರಾಜ್‌, ರಾಗಿಣಿ ಚಂದ್ರನ್‌ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.