ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋಜುಗಾದ ಸೂಜುಮಲ್ಲಿಗೆ’ ಜನಪದ ಹಾಡು ಬಳಕೆ, ಇಂದು ತೀರ್ಪು

Last Updated 7 ಡಿಸೆಂಬರ್ 2021, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ಗರುಡ ಗಮನ ವೃಷಭ ವಾಹನ’ ಚಲನಚಿತ್ರ ಪ್ರದರ್ಶನಕ್ಕೆ ತಡೆ ನೀಡುವಂತೆ ಕೋರಿರುವ ಮಧ್ಯಂತರ ಮನವಿಗೆ ಸಂಬಂಧಿಸಿದಂತೆ ಸಿಟಿ ಸಿವಿಲ್ ಕೋರ್ಟ್‌ ಬುಧವಾರ (ಡಿ.8) ತೀರ್ಪು ಪ್ರಕಟಿಸಲಿದೆ.

ಈ ಸಂಬಂಧ ಕರುನಾಡು ವಿಜಯ ಸೇನೆಯ ಬೆಂಗಳೂರು ನಗರ ಜಿಲ್ಲಾ ಘಟಕ ಅಧ್ಯಕ್ಷ ವಿಜಯ್ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು18ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶ ದಿನೇಶ್ ಹೆಗಡೆ ಮಂಗಳವಾರ ವಿಚಾರಣೆ ನಡೆಸಿ, ಬುಧವಾರ ತೀರ್ಪು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

'ಚಿತ್ರದಲ್ಲಿ ಕೊಲೆ ಮಾಡುವ ದೃಶ್ಯಕ್ಕೆ ಮಲೆ ಮಹದೇಶ್ವರನ ಕುರಿತ, ‘ಸೋಜುಗಾದ ಸೂಜುಮಲ್ಲಿಗೆ’ ಜನಪದ ಹಾಡು ಬಳಕೆ ಮಾಡಿರುವುದು ಆಕ್ಷೇಪಾರ್ಹ. ಇದರಿಂದ ಭಕ್ತರ ಭಾವನೆಗಳಿಗೆ ಮತ್ತು ಜನಪದ ಸಂಸ್ಕೃತಿಗೆ ಧಕ್ಕೆ ಉಂಟಾಗಲಿದೆ. ಆದ್ದರಿಂದ, ಚಿತ್ರ ಪ್ರರ್ದಶನಕ್ಕೆ ತಡೆ ನೀಡಬೇಕು ಅಥವಾ ಚಿತ್ರದಿಂದ ಈ ವಿವಾದಿತ ಹಾಡನ್ನು ತೆಗೆದು ಹಾಕಲು ಚಿತ್ರತಂಡಕ್ಕೆ ಆದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT