ಬೆಂಗಳೂರು: ನಗರದ ಒರಾಯನ್ ಮಾಲ್ ಬ್ರಿಗೇಡ್ ಗೇಟ್‌ವೇನಲ್ಲಿ ಕೊರಿಯಾ ಉತ್ಸವ ಆಯೋಜಿಸಲಾಗಿದೆ.

ಜುಲೈ 10ರವರೆಗೆ ಉತ್ಸವ ನಡೆಯ ಲಿದೆ.ಕೊರಿಯಾ ಸಂಸ್ಕೃತಿ, ಸಾಹಸ ಕ್ರೀಡೆಗಳು ಹಾಗೂ ಪಾಕಶೈಲಿಗಳನ್ನು ಪರಿಚಯಿಸುವುದು ಉತ್ಸವದ ಉದ್ದೇಶ ವಾಗಿದೆ.

‘ಉಭಯ ದೇಶಗಳ ಸಂಸ್ಕೃತಿ ಪರಿಚಯಿಸುವ ಕಾರ್ಯಕ್ರಮ ಇದಾಗಿದೆ’ ಎಂದು ಬ್ರಿಗೇಡ್ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ನಿರೂಪ ಶಂಕರ್ ಪ್ರತಿಕ್ರಿಯಿಸಿದ್ದಾರೆ.

‘ಭಾರತದಲ್ಲಿ ಕೊರಿಯನ್ ಉತ್ಪನ್ನ ಗಳಿಗೆ ಅಪಾರ ಬೇಡಿಕೆ ಇದೆ. ಈ ಕಾರ್ಯಕ್ರಮದ ಮೂಲಕ ಆಹಾರ, ಸಂಸ್ಕೃತಿ ಮತ್ತು ಉತ್ಪನ್ನಗಳೊಂದಿಗೆ ಕೊರಿಯಾವನ್ನು ಪರಿಚಯಿಸಲು ಸಾಧ್ಯವಾಗಲಿದೆ. ಭವಿಷ್ಯದಲ್ಲಿ ಸಹ ಜನರಿಂದ ಇದೇ ಪ್ರೀತಿಯನ್ನು ಸ್ವೀಕರಿ ಸುವ ಭರವಸೆಯನ್ನು ಹೊಂದಿದ್ದೇವೆ’ ಎಂದು ಭಾರತದಲ್ಲಿ ಕೊರಿಯಾದ ರಾಯಭಾರಿಯಾಗಿರುವ ಜಾಂಗ್ ಜೆ-ಬಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.