ಪರಭಾಷಿಗರು ಕರ್ನಾಟಕ ಬಿಟ್ಟು ತೊಲಗಲಿ: ವಾಟಾಳ್‌ ನಾಗರಾಜ್

7

ಪರಭಾಷಿಗರು ಕರ್ನಾಟಕ ಬಿಟ್ಟು ತೊಲಗಲಿ: ವಾಟಾಳ್‌ ನಾಗರಾಜ್

Published:
Updated:

ಬೆಂಗಳೂರು: ‘ಪರಭಾಷಿಗರು ಕರ್ನಾಟಕ ಬಿಟ್ಟು ತೊಲಗಬೇಕು, ಕನ್ನಡ ಪರ ಹೋರಾಟಗಳು ಮತ್ತೆ ನಡೆಯಬೇಕು’ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್ ಆಗ್ರಹಿಸಿದರು.

ನಗರದ ಕನ್ನಡ ಸಾಹಿತ್ಯ‌ ಪರಿಷತ್ತಿನಲ್ಲಿ ಗುರುವಾರ ಆಯೋಜಿಸಿದ್ದ ವೀರಸೇನಾನಿ ಮ.ರಾಮಮೂರ್ತಿ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪರಭಾಷಿಕರೇ ಹೆಚ್ಚಾಗಿ ಆವರಿಸಿಕೊಂಡಿದ್ದರಿಂದ ಬೆಂಗಳೂರು ಕನ್ನಡಿಗರ ಕೈಯಲ್ಲಿ ಉಳಿದಿಲ್ಲ. ಅವರನ್ನು ಇಲ್ಲಿಂದ ಹೊರದೂಡಲೇಬೇಕಿದೆ. ರಸ್ತೆ ರಸ್ತೆಯಲ್ಲಿ ಅವರನ್ನು ಸುಡಬೇಕು. ‘ಕರ್ನಾಟಕ ಬಿಟ್ಟು ತೊಲಗಿ’ ಎನ್ನುವ ಚಳುವಳಿಗಳು ತೀವ್ರ ಸ್ವರೂಪದಲ್ಲಿ ನಡೆಯಬೇಕು’ ಎಂದು ಗುಡುಗಿದರು. 

‘ಕನ್ನಡ ಕೈಬಿಟ್ಟು ಹೋಗುತ್ತಿದೆ. ಈ ಬಗ್ಗೆ ಪರಿಣಾಮಕಾರಿ ಚರ್ಚೆಗಳು ನಡೆಯಬೇಕಿದೆ. ಕನ್ನಡಿಗರಿಗೆ ಮಾತ್ರ ಉದ್ಯೋಗಗಳು ಮೀಸಲಾಗುವಂತೆ ಹೋರಾಟ ನಡೆಸುವ ಅನಿವಾರ್ಯವಿದೆ. ಕನ್ನಡದ ಉಳಿವಿಗಾಗಿ ಎಚ್ಚೆತ್ತುಕೊಳ್ಳಲೇಬೇಕು’ ಎಂದರು. 

‘ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ತಮಿಳಿಗರ ಪರ ನಿಂತ ರಜನಿಕಾಂತ ಅವರ ಕಾಲಾ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದ ರಾಜ್ಯ ಸರ್ಕಾರದ ನಡೆ ನಾಚಿಕೆಗೇಡಿನ ಸಂಗತಿ. ಡಬ್ಬಿಂಗ್‌ ಸಂಸ್ಕೃತಿಯಿಂದಾಗಿ ನಮ್ಮ ನೆಲದ ಕಲಾವಿದರು ಬೀದಿಪಾಲಾಗುತ್ತಿದ್ದಾರೆ. ಜೈಲುವಾಸಿಯಾದರೂ ಚಿಂತೆಯಿಲ್ಲ ಸಿನಿಮಾ, ಧಾರವಾಹಿಗಳ ಡಬ್ಬಿಂಗ್ ನಿಲ್ಲಲೇಬೇಕು’ ಎಂದು ಅವರು ಆಗ್ರಹಿಸಿದರು. 

ಕನ್ನಡ ಪರ ಹೋರಾಟಗಾರ ಟಿ.ಪಿ.ಪ್ರಸನ್ನಕುಮಾರ್‌ ಮ.ರಾಮಮೂರ್ತಿ ಅವರೊಂದಿಗಿನ ಒಡನಾಟದ ಕುರಿತು  ಮಾತನಾಡಿದರು.

ಕಮಲಮ್ಮ ಮ.ರಾಮಮೂರ್ತಿ ಹಾಗೂ ಇತರರನ್ನು ಸನ್ಮಾನಿಸಲಾಯಿತು.  

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !