ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಇಎಸ್ ವಿವಿ ಘಟಿಕೋತ್ಸವ: 24 ಮಂದಿಗೆ ಚಿನ್ನ

ವಿವಿಧ ವಿಭಾಗಗಳಲ್ಲಿ 3,495 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
Last Updated 8 ಸೆಪ್ಟೆಂಬರ್ 2022, 16:40 IST
ಅಕ್ಷರ ಗಾತ್ರ

ಬೆಂಗಳೂರು: ‘ಪಿಇಎಸ್ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ಶುಕ್ರವಾರ (ಸೆ.9) ನಡೆಯಲಿದ್ದು, 3,495 ವಿದ್ಯಾರ್ಥಿಗಳು ಈ ಬಾರಿ ಪದವಿ ಪಡೆಯಲಿದ್ದಾರೆ’ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್. ದೊರೆಸ್ವಾಮಿ ತಿಳಿಸಿದರು.

ಗುರುವಾರಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾಲಯದಪ್ರೊ.ಎಂ.ಆರ್.ಡಿ ಕಟ್ಟಡದ ಸಭಾಂಗಣದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಕೌಶಲಾಭಿವೃದ್ಧಿ ಹಾಗೂ ಉದ್ದಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರುಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಸಹಕುಲಾಧಿಪತಿ ಪ್ರೊ. ಡಿ.ಜವಾಹರ್ ಅವರು ಘಟಿಕೋತ್ಸವದ ಪ್ರಮಾಣ ವಚನ ಬೋಧಿಸಲಿದ್ದಾರೆ.ವಿವಿಧ ವಿಭಾಗಗಳಲ್ಲಿ ರ್‍ಯಾಂಕ್‌ ಪಡೆದ 92 ಅಭ್ಯರ್ಥಿಗಳಲ್ಲಿ, 24 ಮಂದಿಗೆಚಿನ್ನದ ಪದಕ ನೀಡಿ ಪುರಸ್ಕರಿಸಲಾಗುವುದು. ನಾಲ್ವರಿಗೆ ಚಿನ್ನ ಲೇಪಿತ ಬೆಳ್ಳಿ ಪದಕ ಹಾಗೂ ಉಳಿದವರಿಗೆ ಬೆಳ್ಳಿ ಪದಕ ನೀಡಲಾಗುವುದು’ ಎಂದರು.

‘ರ್‍ಯಾಂಕ್ ಪಡೆದವರಲ್ಲಿ 52 ಮಂದಿ ವಿದ್ಯಾರ್ಥಿನಿಯರಾಗಿದ್ದಾರೆ. ಈ ಬಾರಿ ನಾಲ್ವರಿಗೆಪಿಎಚ್‌.ಡಿ ಪ್ರದಾನ ಮಾಡಲಾಗುತ್ತಿದೆ. ದಿವ್ಯಾ ಜೋಸೆಫ್ ಪೆರೇರಾ, ಸಂತಮೀನಾ ಎಸ್., ರಾಜೇಂದ್ರ ಪ್ರಸಾದ್ ಕೆ.ಎಸ್. ಹಾಗೂ ಸುಚಿತ್ರಾ ಸಕ್ಸೆನಾ ಅವರುಪಿಎಚ್‌.ಡಿ ಪಡೆಯಲಿದ್ದಾರೆ’ ಎಂದು ಹೇಳಿದರು.

‘ಉದ್ಯೋಗ ಆಯ್ಕೆಗಾಗಿ ಕ್ಯಾಂಪಸ್‌ನಲ್ಲೇ ನಡೆಸುವ ಸಂದರ್ಶನಕ್ಕೆ ಉತ್ತಮ ಸ್ಪಂದನ ವ್ಯಕ್ತವಾಗಿದೆ. 2022ರಲ್ಲಿಬಿ.ಟೆಕ್‌ ಪದವಿ ಪಡೆದವರಲ್ಲಿ 1,496 ವಿದ್ಯಾರ್ಥಿಗಳುಕ್ಯಾಂಪಸ್‌ ಸಂದರ್ಶನಕ್ಕೆ ಅರ್ಹತೆ ಹೊಂದಿದ್ದರು. ಅವರಲ್ಲಿ 1,329 ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರೆತಿದೆ.268 ಕಂಪನಿಗಳು ಭೇಟಿ ನೀಡಿ ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿವೆ. ಕೆಲವು ವಿದ್ಯಾರ್ಥಿಗಳು ವರ್ಷಕ್ಕೆ ಗರಿಷ್ಠ ₹ 60 ಲಕ್ಷದಷ್ಟು ವೇತನ ಪಡೆದಿದ್ದಾರೆ’ ಎಂದರು.

ಕುಲಸಚಿವ ಡಾ.ಕೆ.ಎಸ್.ಶ್ರೀಧರ್, ‘2023ರಲ್ಲಿ ಪದವಿ ಪಡೆಯುವ ಬಿ.ಟೆಕ್‌ ವಿದ್ಯಾರ್ಥಿಗಳಿಗೂ ಕ್ಯಾಂಪಸ್ ಸಂದರ್ಶನವನ್ನು 2022ರ ಆಗಸ್ಟ್‌ 1ರಿಂದ ನಡೆಸಲಾಗುತ್ತಿದೆ. ಈ ಸಂದರ್ಶನಕ್ಕೆ 1,543 ವಿದ್ಯಾರ್ಥಿಗಳು ಅರ್ಹತೆ ಹೊಂದಿದ್ದು, ಈಗಾಗಲೇ 375 ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರೆತಿದೆ. 54 ಕಂಪನಿಗಳು ಈವರೆಗೆ ಕ್ಯಾಂಪಸ್ ಸಂದರ್ಶನ ನಡೆಸಿವೆ. ಕೆಲವು ವಿದ್ಯಾರ್ಥಿಗಳು ವರ್ಷಕ್ಕೆ ಗರಿಷ್ಠ ₹ 54 ಲಕ್ಷದಷ್ಟು ವೇತನ ಪಡೆದಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT