ಗುರುವಾರ , ಆಗಸ್ಟ್ 22, 2019
25 °C

ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಯಾಗಿ ಪೇಶ್ವೆ

Published:
Updated:

ಬೆಂಗಳೂರು: ವರ್ಷದಲ್ಲಿ ನಾಲ್ಕು ಬಾರಿ ವರ್ಗಾವಣೆ ಕಂಡಿದ್ದ ಮುಖ್ಯ ಎಂಜಿನಿಯರ್ ಎನ್.ಲಕ್ಷ್ಮಣರಾವ್ ಪೇಶ್ವೆ ಅವರನ್ನು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಪ್ರಸ್ತುತ ಕಾಡಾ ಆಡಳಿತಾಧಿಕಾರಿಯಾಗಿದ್ದ ಪೇಶ್ವೆ ಅವರನ್ನು ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿದ್ದು, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಹುದ್ದೆಯ ಪ್ರಭಾರವನ್ನೂ ವಹಿಸಲಾಗಿದೆ. ಮಲಪ್ರಭಾ ಯೋಜನಾ ವಲಯದ ಮುಖ್ಯ ಎಂಜಿನಿಯರ್‌ ಹುದ್ದೆಗೆ ನೇಮಕಗೊಂಡ ಒಂದು ತಿಂಗಳಲ್ಲೇ ಅವರನ್ನು ಎತ್ತಂಗಡಿ ಮಾಡಿ, ಕಾಡಾ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.

ಐಎಎಸ್ ವರ್ಗಾವಣೆ: ಡಾ.ಎಂ.ವಿ.ವೆಂಕಟೇಶ್‌ ಅವರನ್ನು ಮಂಡ್ಯ ಜಿಲ್ಲಾಧಿಕಾರಿಯನ್ನಾಗಿ, ಬಿ.ಫೌಜಿಯಾ ತರನುಮ್‌ ಅವರನ್ನು ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ಕೆಎಂಎಫ್: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಬಿ.ಸಿ.ಸತೀಶ್ ಅವರನ್ನು ನೇಮಿಸಲಾಗಿದೆ.

 

Post Comments (+)