ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಸೈಕಲ್ ಪೂರೈಸಿದಮಾರಾಟಗಾರರು, ಟೆಂಡರ್‌ನಲ್ಲಿ ನಮೂದಿಸಿದ ಕೆಲವೊಂದು ಮಾನದಂಡಗಳನ್ನುಪೂರೈಸದೆ ಇರುವ ಕಾರಣ ಅವರಿಂದ ದಂಡ ವಸೂಲಿಗೆ ಸರ್ಕಾರ ಕ್ರಮ ಕೈಗೊಂಡಿದೆ.

ಮಕ್ಕಳಿಗೆ ಪೂರೈಸಲಾದ ಸೈಕಲ್‌ಗಳಲ್ಲಿನ ತೊಂದರೆಗಳ ಕುರಿತಂತೆ ಪರಿಶೀಲನೆ ನಡೆಸಿದ ತಾಂತ್ರಿಕ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದರ ಆಧಾರದಲ್ಲಿ ಪೂರೈಕೆದಾರರಿಗೆ ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆ.ಜಿ.ಜಗದೀಶ್ ತಿಳಿಸಿದ್ದಾರೆ.

‘ಕೆಲವೊಂದು ಮಾನದಂಡಗಳನ್ನು ಮಾತ್ರ ಪೂರೈಸಿಲ್ಲ, ಹೀಗಾಗಿ ಸೈಕಲ್‌ನ ಒಟ್ಟಾರೆ ಗುಣಮಟ್ಟದ ಮೇಲೆ ಅಂತಹ ಪರಿಣಾಮ ಬೀರಿಲ್ಲ. ಸರ್ಕಾರಕ್ಕೆ ತಜ್ಞರ ವರದಿ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ದೊರೆತ ಬಳಿಕ ದಂಡದ ಮೊತ್ತವನ್ನು ಕಡಿತಗೊಳಿಸಿ ಪೂರೈಕೆದಾರರ ಬಿಲ್ ಪಾವತಿ ಮಾಡಲಾಗುವುದು’ ಎಂದು ಹೇಳಿದ್ದಾರೆ.

2019–20ನೇ ಸಾಲಿನಲ್ಲಿ ₹ 180 ಕೋಟಿ ವೆಚ್ಚದಲ್ಲಿ 5.04 ಲಕ್ಷ ಸೈಕಲ್‌ಗೆ ಟೆಂಡರ್ ಕರೆಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.