ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ 3ನೇ ಅಲೆ: ಪುನರ್ವಸತಿ ಕೇಂದ್ರಕ್ಕಿಲ್ಲ ದಾಖಲಾತಿ

ಮೊದಲೆರಡು ಅಲೆಯಲ್ಲಿ ಗುಣಮುಖರಿಗೆ ಕಾಡಿದ್ದ ಕೋವಿಡೋತ್ತರ ಸಮಸ್ಯೆ
Last Updated 11 ಫೆಬ್ರುವರಿ 2022, 20:35 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಮೂರನೇ ಅಲೆಯಲ್ಲಿ ವೈರಾಣುವಿನ ತೀವ್ರತೆ ಕಡಿಮೆ ಇದ್ದಿದ್ದರಿಂದ ಚೇತರಿಸಿಕೊಂಡ ವರಲ್ಲಿ ಈವರೆಗೆ ಹೊಸ ಸಮಸ್ಯೆಗಳು ಪತ್ತೆಯಾಗಿಲ್ಲ. ಇದರಿಂದಾಗಿ ಇಲ್ಲಿನ ಕೋವಿಡ್ ಪುನರ್ವಸತಿ ಕೇಂದ್ರಕ್ಕೆ ಈ ಬಾರಿ ಹೊಸ ಪ್ರಕರಣಗಳು ದಾಖಲಾಗಿಲ್ಲ.

ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಗುಣಮುಖರಿಗೆ ಉಸಿರಾಟದ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಂಡಿ ದ್ದವು. ಅಂಥವರಿಗೆ ಚಿಕಿತ್ಸೆ ಒದಗಿ ಸಲುರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಕೋವಿಡ್‌ ಪುನರ್ವಸತಿ ಕೇಂದ್ರ ನಡೆಸಲಾಗುತ್ತಿದೆ.

ಕೋವಿಡ್‌ ಎರಡನೇ ಅಲೆಯಲ್ಲಿ ಸೋಂಕಿನಿಂದ ಚೇತರಿಸಿಕೊಂಡ ಶೇ 10ರಷ್ಟು ಮಂದಿಯಲ್ಲಿ ವಿವಿಧ ಸಮಸ್ಯೆಗಳು ಕಾಣಿಸಿ ಕೊಂಡಿದ್ದವು.

ಮೂರನೇ ಅಲೆಯಲ್ಲಿ ಮುನ್ನೆಚ್ಚ ರಿಕೆ ಕ್ರಮವಾಗಿ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 30 ಹಾಸಿಗೆಗಳ ಒಂದು ವಾರ್ಡ್‌ ಮೀಸಲಿಡಲಾಗಿದೆ.
ರಾಜ್ಯದಲ್ಲಿ ಸದ್ಯ ಕಾರ್ಯನಿ ರ್ವ ಹಿಸುತ್ತಿರುವಏಕೈಕ ಸರ್ಕಾರಿ ಪುನ ರ್ವಸತಿ ಕೇಂದ್ರ ಇದಾಗಿದೆ.

ಎರಡನೇ ಅಲೆಯಲ್ಲಿ ಚೇತರಿಸಿಕೊಂಡವರಲ್ಲಿಪ್ರತಿ ನಿತ್ಯ ಸರಾಸರಿ ನಾಲ್ವರು ಈ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದರು. 2021ರ ಅಕ್ಟೋಬರ್ ಬಳಿಕಈವರೆಗೆ ನಾಲ್ವರು ಮಾತ್ರ ಭೇಟಿ ಮಾಡಿದ್ದಾರೆ. ಇವರು ಕೂಡ ಈ ಮೊದಲು ಚಿಕಿತ್ಸೆ ಪಡೆದುಕೊಂಡವರು. ಒಬ್ಬರನ್ನು ಮಾತ್ರ ದಾಖಲಿಸಿಕೊಳ್ಳಲಾಗಿದೆ.

ಎರಡನೇ ಅಲೆಯಲ್ಲಿ ಕೇಂದ್ರಕ್ಕೆ ಭೇಟಿ ನೀಡಿದವರಲ್ಲಿ ಶೇ 33ರಷ್ಟು ಮಂದಿ ಉಸಿರಾಟದ ಸಮಸ್ಯೆ, ಶೇ 28 ರಷ್ಟು ಜನರು ಕೆಮ್ಮು, ಶೇ 24 ರಷ್ಟು ಮಂದಿ ಶ್ವಾಸಕೋಶದ ಸಮಸ್ಯೆ ಹಾಗೂ ಶೇ 15ರಷ್ಟು ಮಂದಿ ಆಮ್ಲಜನಕದ ಕೊರತೆಯ ಜತೆಗೆ ಖಿನ್ನತೆ ಸೇರಿದಂತೆ ವಿವಿಧ ಮಾನಸಿಕ ಸಮಸ್ಯೆಗಳನ್ನೂ ಎದುರಿಸಿದವರಾಗಿದ್ದಾರೆ.

ತೀವ್ರತೆ ಕಡಿಮೆ: ಕೋವಿಡ್ ಮೂರನೇ ಅಲೆಯಲ್ಲಿ ನಗರದಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್ ಪೀಡಿತರಾಗಿದ್ದಾರೆ.

ಸೋಂಕಿನ ತೀವ್ರತೆ ಕಡಿಮೆ ಇದ್ದಿದ್ದರಿಂದ ಶೇ 5 ರಷ್ಟು ಮಂದಿ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಿದ್ದಾರೆ. ಶೇ 95 ರಷ್ಟು ಮಂದಿಗೆ ಮನೆಯಲ್ಲಿಯೇ ಸೋಂಕು ವಾಸಿಯಾಗಿದೆ.

‘ಕೋವಿಡ್ ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾದವರು 5ರಿಂದ 7 ದಿನಗಳ ಅವಧಿಯಲ್ಲಿ ಚೇತರಿಸಿಕೊಂಡಿದ್ದಾರೆ. ಸೋಂಕು ಶ್ವಾಸಕೋಶಕ್ಕೆ ಹಾನಿ ಮಾಡದಿರು ವುದೇ ಮುಖ್ಯ ಕಾರಣ. ಆಸ್ಪತ್ರೆಗೆ ದಾಖಲಾದವರಿಗೂ ವೈದ್ಯಕೀಯ ಆಮ್ಲಜನಕದ ಸಂಪರ್ಕ ಅಗತ್ಯ ಇರಲಿಲ್ಲ. ಇದರಿಂದಾಗಿ ಚೇತರಿಸಿಕೊಂಡವರಿಗೆ ಹೊಸದಾಗಿ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತಿಲ್ಲ’ ಎಂದು ಸಂಸ್ಥೆ ನಿರ್ದೇಶಕ ಡಾ.ಸಿ. ನಾಗರಾಜ್ ತಿಳಿಸಿದರು.

‘ಎರಡನೇ ಅಲೆಯಲ್ಲಿಕೋವಿಡ್ ವಾಸಿಯಾದ ಕೆಲ ದಿನಗಳ ಬಳಿಕ ಉಸಿರಾಟದ ಸಮಸ್ಯೆ, ಮೈ–ಕೈ ನೋವು, ಕೆಮ್ಮು ಸೇರಿದಂತೆ ವಿವಿಧ ಸಮಸ್ಯೆಗಳು ಹಲವರಲ್ಲಿ ಕಾಣಿಸಿ ಕೊಂಡಿದ್ದವು. ಹೆಚ್ಚಿನವರು ಮಾನಸಿಕ ಸಮಸ್ಯೆಗೆ ಒಳಗಾಗಿದ್ದರು. ಈ ಬಾರಿ ಆ ಪರಿಸ್ಥಿತಿಯಿಲ್ಲ’ ಎಂದು ಅವರು ಹೇಳಿದರು.

ಮರಣ ಪ್ರಮಾಣ ದರ ಅಧಿಕ

ನಗರದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ 5 ಸಾವಿರದ ಗಡಿಯೊಳಗೆ ಇಳಿಕೆ ಕಂಡಿದೆ. ಈ ಸಂಖ್ಯೆ ಮೂರನೇ ಅಲೆಯಲ್ಲಿ 30 ಸಾವಿರದ ಗಡಿದಾಟಿತ್ತು. ಜನವರಿ ತಿಂಗಳಲ್ಲಿ ಶೇ 25ರ ಗಡಿ ದಾಟಿದ್ದ ಸೋಂಕು ದೃಢ ಪ್ರಮಾಣ, ಸದ್ಯ ಶೇ 5ರ ಗಡಿಯ ಆಸುಪಾಸಿನಲ್ಲಿದೆ.ಮರಣ ಪ್ರಮಾಣ ದರವು ಶೇ 0.50ರ ಗಡಿಗೆ ಏರಿಕೆಯಾಗಿದೆ.ಈ ಪ್ರಮಾಣ ಇನ್ನಷ್ಟು ದಿನ ಏರಿಕೆಯಲ್ಲಿಯೇ ಇರಲಿದೆ ಎಂದು ವೈದ್ಯಕೀಯ ತಜ್ಞರು ಅಭಿಮತವ್ಯಕ್ತಪಡಿಸಿದ್ದಾರೆ.

‘ಸೋಂಕು ದೃಢ ಪ್ರಮಾಣ ಕಡಿಮೆಯಾದರೂ ಇನ್ನೂ ಕೆಲ ದಿನಗಳು ಮರಣ ಪ್ರಮಾಣ ದರ ಅಧಿಕ ಇರಲಿದೆ. ಮೃತಪಡುತ್ತಿರುವವರಲ್ಲಿ ಬಹುತೇಕರು ಅನ್ಯರೋಗ ಹಾಗೂ ಸಹ ಅಸ್ವಸ್ಥತೆ ಹೊಂದಿದ್ದವರಾಗಿದ್ದಾರೆ. ಕೋವಿಡ್ ಮೊದಲೆರಡು ಅಲೆಗೆ ಹೋಲಿಕೆ ಮಾಡಿದರೆ ಮರಣ‍ಪ್ರಮಾಣದರ ಕಡಿಮೆ ಇದೆ. ಮನೆ ಆರೈಕೆಯಲ್ಲಿ ಇರುವವರು ರೋಗ ಲಕ್ಷಣ ಉಲ್ಬಣಗೊಂಡ ಬಳಿಕ ಆಸ್ಪತ್ರೆಗೆ ದಾಖಲಾಗಬೇಕು’ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT