ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಹಲವೆಡೆ ಇಂದಿನಿಂದ ವಿದ್ಯುತ್ ವ್ಯತ್ಯಯ

Published 19 ಜನವರಿ 2024, 21:54 IST
Last Updated 19 ಜನವರಿ 2024, 21:54 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧ ವಿದ್ಯುತ್‌ ನಿರ್ವಹಣಾ ಕೇಂದ್ರಗಳಲ್ಲಿ ನಿರ್ವಹಣೆ ಕಾಮಗಾರಿ ಕೈಗೊಳ್ಳುವುದರಿಂದ ಇದೇ 20, 21 ಹಾಗೂ 22ರಂದು ವಿವಿಧ ಸ್ಥಳಗಳಲ್ಲಿ ಬೆಳಿಗ್ಗೆ 10ರಿಂದ
ಮಧ್ಯಾಹ್ನ 3ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

20ಕ್ಕೆ ನಾಗನಾಥಪುರ ವಿದ್ಯುತ್‌ ನಿರ್ವಹಣಾ ಕೇಂದ್ರ: ಹೊಸೂರು ಮುಖ್ಯರಸ್ತೆ, ಬಂಡೆಪಾಳ್ಯ, ಸಿಂಗಸಂದ್ರ, ಜಿ.ಬಿ. ಪಾಳ್ಯ, ಕೂಡ್ಲು ಗೇಟ್, ಎಇಸಿಎಸ್‌ ಲೇಔಟ್ ಎ–ಬಿ ಬ್ಲಾಕ್, ಹೊಂಗಸಂದ್ರ, ಓಂಶಕ್ತಿ ಲೇಔಟ್, ಬೊಮ್ಮನಹಳ್ಳಿ, ಬೇಗೂರು ಗೇಟ್, ಬಿಟಿಆರ್ ಉದ್ಯಾನ, ಮುನೇಶ್ವರ ಲೇಔಟ್, ಹರಳುಕುಂಟೆ, ಹೊಸಪಾಳ್ಯ, ಓಝೋನ್ ಟೆಕ್‌ಪಾರ್ಕ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

21ಕ್ಕೆ ಖೋಡೆಸ್‌ ಗ್ಲಾಸ್‌ ಫ್ಯಾಕ್ಟರಿ ವಿದ್ಯುತ್‌ ನಿರ್ವಹಣಾ ಕೇಂದ್ರ: ಆವಲಹಳ್ಳಿ, ನಂದಿ ಗಾರ್ಡನ್‌ ಅಪಾರ್ಟ್‌ಮೆಂಟ್‌, ಅಂಜನಾಪುರ ಗ್ರಾಮ, ರಾಯಲ್ ಲೇಕ್‌ ಫ್ರಂಟ್‌ ವ್ಯೂ ರೆಸಿಡೆನ್ಸಿ, ಬ್ರೂಕ್ಸ್‌ ಲೇಔಟ್, ವಡ್ಡರಪಾಳ್ಯ, ಆವಲಹಳ್ಳಿ ಸ್ಲಂ, ಶ್ರೀನಿವಾಸ ಬ್ಯಾಂಕ್ ಲೇಔಟ್, ರಾಯಲ್ ಲೇಔಟ್‌ ಅಧಿಕಾರಿಗಳು ನಾರಾಯಣ ನಗರ 1 ಮತ್ತು 2ನೇ ಬ್ಲಾಕ್, ತಲಘಟ್ಟಪುರ, ನ್ಯಾಯಾಂಗ ಬಡಾವಣೆ, ವಾಜರಹಳ್ಳಿ, ಶೋಭಾ ಅಪಾರ್ಟ್‌ಮೆಂಟ್, ರಾಘವಪಾಳ್ಯ ಗುಂಡು ತೋಪು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

22ಕ್ಕೆ ದೇವರಬೀಸನಹಳ್ಳಿ ವಿದ್ಯುತ್‌ ನಿರ್ವಹಣಾ ಕೇಂದ್ರ: ಬೆಳ್ಳಂದೂರು, ಆರ್.ಎಂ. ಝಡ್, ದೇವರಬಿಸನಹಳ್ಳಿ, ಕರಿಯಮ್ಮನಪಾಳ್ಯ, ಅಕ್ಮೆ ಪ್ರಾಜೆಕ್ಟ್‌ಗಳು, ಅನುಪಮಾ, ಟೋಟಲ್ ಮಾಲ್, ಶೋಭಾ ಐರಿಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT