ವಿದ್ಯಾರ್ಥಿಗಳಿಗೆ ಮದ್ಯ; ಪಬ್ ಪರವಾನಗಿ ಜಪ್ತಿ

7

ವಿದ್ಯಾರ್ಥಿಗಳಿಗೆ ಮದ್ಯ; ಪಬ್ ಪರವಾನಗಿ ಜಪ್ತಿ

Published:
Updated:

ಬೆಂಗಳೂರು: ಅಬ್ಬರದ ಸಂಗೀತದ ಜತೆಗೆ ಕಾಲೇಜು ವಿದ್ಯಾರ್ಥಿಗಳಿಗೆ (18 ವರ್ಷಕ್ಕಿಂತ ಕಡಿಮೆ ವಯೋಮಾನದ) ಮದ್ಯ ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ಇಂದಿರಾ ನಗರದ ‘ಬಾಟಲ್ & ಗ್ಲಾಸ್‌’ ಪಬ್‌ನ ಪರವಾನಗಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ನಗರದ ಕಾಲೇಜೊಂದರ ವಿದ್ಯಾರ್ಥಿಗಳು ಈ ಪಬ್‌ನಲ್ಲಿ ‘ಅರ್ಬನ್ ಡ್ರಾಪ್ಸ್‌ 12 ನೂನ್ ಆನ್‌ವರ್ಡ್ಸ್‌’ ಹೆಸರಿನಲ್ಲಿ ಶನಿವಾರ ಪಾರ್ಟಿ ಆಯೋಜಿಸಿದ್ದರು. ಡಿಸ್ಕೊ ಜಾಕಿಗಳನ್ನು ಬಳಸಿಕೊಂಡು ಅಬ್ಬರದ ಸಂಗೀತವನ್ನೂ ಹಾಕಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಈ ಬಗ್ಗೆ ನಮ್ಮ ಮಾಹಿತಿದಾರರೊಬ್ಬರು ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಮಫ್ತಿಯಲ್ಲಿ ದಾಳಿ ನಡೆಸಿದಾಗ, ವಿದ್ಯಾರ್ಥಿಗಳು ಮದ್ಯದ ಅಮಲಿನಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಪಬ್‌ನ ನೌಕರರು ವಿದ್ಯಾರ್ಥಿಗಳಿಗೆ ಮದ್ಯ ಸರಬರಾಜು ಮಾಡುತ್ತಿದ್ದರು.’

‘ನಂತರ ಡಿ.ಜೆ ನಿಲ್ಲಿಸಿ, ಸಂಗೀತ ಉಪಕರಣಗಳು ಹಾಗೂ ಪಬ್‌ನ ಪರವಾನಗಿ ಪ್ರತಿಯನ್ನು ಜಪ್ತಿ ಮಾಡಿದೆವು. ಪಬ್‌ನ ಪರವಾನಗಿದಾರರಾದ ರಾಜ್‌ಗೋಪಾಲ್, ಎಂ.ನಾರಾಯಣ್‌ಗೌಡ, ನಾಗೇಂದ್ರಗೌಡ ಹಾಗೂ ಪಾರ್ಟಿ ಆಯೋಜಕರ ವಿರುದ್ಧ ಅಬಕಾರಿ ಕಾಯ್ದೆ ಹಾಗೂ ಪೊಲೀಸ್ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಅವರ ಪೋಷಕರಿಗೂ ಕರೆ ಮಾಡಿ ಮಕ್ಕಳಿಗೆ ಬುದ್ಧಿ ಹೇಳುವಂತೆ ಸೂಚಿಸಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !