ಸೋಮವಾರ, ಮಾರ್ಚ್ 27, 2023
21 °C
ಅಪಘಾತ ಪ್ರಕರಣ, ಸಾವು–ನೋವು ತಗ್ಗಿಸಲು ವಿಶೇಷ ಅಭಿಯಾನ ಆರಂಭಿಸಿದ ಪೊಲೀಸರು

ರಸ್ತೆ ಅಪಘಾತ: ಬೆಂಗಳೂರಿಗೆ 3ನೇ ಸ್ಥಾನ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದ ಮಹಾನಗರ ಗಳಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳಿಗೆ ಸಂಬಂಧಿಸಿ ರಾಜ್ಯ ರಾಜಧಾನಿ ಬೆಂಗಳೂರು 3ನೇ ಸ್ಥಾನದಲ್ಲಿದೆ.

ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಅಂದಾಜು 60 ಲಕ್ಷ ವಾಹನಗಳಿರುವ ಚೆನ್ನೈ, ರಸ್ತೆ ಅಪಘಾತದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ ಎಂಬ ವರದಿ ಹೊರಬಿದ್ದಿದೆ.

‘ಸಿಲಿಕಾನ್‌ ಸಿಟಿ’ಯಲ್ಲಿ ಒಟ್ಟು 1.10 ಕೋಟಿ ವಾಹನಗಳಿವೆ. ವಾಹನಗಳ ಸಂಖ್ಯೆಯಲ್ಲಿ ಬೆಂಗಳೂರು 2ನೇ ಸ್ಥಾನ
ದಲ್ಲಿದೆ. ರಾಜ್ಯದ ಒಟ್ಟಾರೆ
ವಾಹನಗಳ ಪೈಕಿ ಬೆಂಗ ಳೂರಿನಲ್ಲೇ ಶೇ 50ರಷ್ಟು ವಾಹನಗಳಿವೆ. ವಾಹನ ದಟ್ಟಣೆ ಯಿಂದಾಗಿ ವರ್ಷದಿಂದ ವರ್ಷಕ್ಕೆ ಅಪಘಾತಗಳು ಹೆಚ್ಚುತ್ತಿವೆ. ರಸ್ತೆ ಅಪಘಾತದಿಂದ ಮೃತಪಡುತ್ತಿರುವವರ ಪಟ್ಟಿಯಲ್ಲಿ ನಗರವು 2ನೇ ಸ್ಥಾನಕ್ಕೆ ತಲುಪಿದೆ.

ವಿಶೇಷ ಅಭಿಯಾನ: ರಸ್ತೆ ಅಪಘಾತ ಪ್ರಕರಣ, ಚಾಲಕರ ಸಾವು–ನೋವು ತಗ್ಗಿಸಲು ಪೊಲೀಸರು ನಿಮ್ಹಾನ್ಸ್‌ ಹಾಗೂ ಖಾಸಗಿ ಸಂಸ್ಥೆ ಸಹಯೋಗದಲ್ಲಿ ವಿಶೇಷ ಅಭಿಯಾನ ಆರಂಭಿಸಿದ್ದಾರೆ.

ಮದ್ಯ ಸೇವಿಸಿ ಅಪಘಾತವಾದರೆ ಅಂತಹ ಚಾಲಕರ ಶೈಕ್ಷಣಿಕ ಹಾಗೂ ಕೌಟುಂಬಿಕ ಹಿನ್ನೆಲೆ ಕಲೆ ಹಾಕಿ ಅವರಿಗೆ ತಿಳಿವಳಿಕೆ ನೀಡಲು ಪೊಲೀಸರು ಮುಂದಾಗಿದ್ದಾರೆ. ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ಪೊಲೀಸರು ಹೆಚ್ಚಿನ ಪ್ರಕರಣ ದಾಖಲಿಸಿಕೊಳ್ಳಲು
ಮುಂದಾಗಿದ್ದಾರೆ.

‘ಮದ್ಯ ಸೇವಿಸಿ ವಾಹನ ಚಾಲನೆಯಿಂದ ಹೆಚ್ಚಿನ ಅಪಘಾತಗಳು ಘಟಿಸುತ್ತಿವೆ. ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್‌ರಹಿತ ಪ್ರಯಾಣದಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ವಿಶೇಷ ಅಭಿಯಾನ ಆಯೋಜಿಸಲಾಗಿದೆ’ ಎಂದು ಸಂಚಾರ ವಿಭಾಗದ ವಿಶೇಷ ಕಮಿಷನರ್ ಡಾ.ಎಂ.ಎ.ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

ರಸ್ತೆಗಳು ಉತ್ತಮವಾಗಿದ್ದ ಕಡೆ ವೇಗವಾಗಿ ಸಂಚರಿಸಿ ಅನಾಹುತ ಘಟಿಸಿದರೆ, ಗುಂಡಿಗಳು ಬಿದ್ದ ರಸ್ತೆಯಲ್ಲಿ ಆಯತಪ್ಪಿ ಬಿದ್ದು ಮೃತಪಡುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಅಪಘಾತಕ್ಕೆ ಪಾದಚಾರಿಗಳು, ಸೈಕಲ್‌ ಸವಾರರು, ದ್ವಿಚಕ್ರ ವಾಹನ ಸವಾರರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ ಎಂದು ವರದಿ
ತಿಳಿಸಿದೆ.

ಚಾಲಕನಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳವಲ್ಲಿನ ವಿಳಂಬ, ಅಪಾಯಕಾರಿ ಸಂದರ್ಭ ನಿಧಾನ ಪ್ರಕ್ರಿಯೆ, ಮಂದ ಅಥವಾ ಕಡಿಮೆ ದೃಷ್ಟಿ, ಗಮನಹರಿಸುವಲ್ಲಿ ವಿಳಂಬ, ಚಾಲನೆಯಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದಿರುವುದು, ರಸ್ತೆ ಅಡೆತಡೆ ಗುರುತಿಸುವಲ್ಲಿ ವಿಫಲವಾಗುವುದು ರಸ್ತೆ ಅಪಘಾತಕ್ಕೆ ಕಾರಣಗಳು ಎಂದು ವರದಿ ಹೇಳಿದೆ.

ರಾಜಧಾನಿಯಲ್ಲಿ ಅಪಘಾತ ಪ್ರಕರಣಗಳು

ವರ್ಷ;ಅಪಘಾತ;ಮಾರಣಾಂತಿಕ ಅಪಘಾತ;ಮೃತರ ಸಂಖ್ಯೆ;ಮಾರಣಾಂತಿಕವಲ್ಲದ ಅಪಘಾತ;ಗಾಯಾಳು
2014;5,004;711;737;4,293;4,096
2015;4,828;714;740;4,114;4,047
2016;5,333;754;793;4,579;4,193
2017;5,064;609;642;4,455;4,256
2018;4,611;663;686;3,948;4,149
2019;4,684;746;768;3,938;4,250
2020;3,233;621;646;2,612;2,751
2021;3,213;621;654;2,592;2,820
2022;3,822;772;772;3,070;3,189
2023(ಜನವರಿ ಅಂತ್ಯದ ವೇಳೆಗೆ);433;76;78;357;391

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು