ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಸುಲಿಗೆ

7
ಭಾರತಿನಗರ ಪೊಲೀಸರಿಂದ ಐವರ ಬಂಧನ

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಸುಲಿಗೆ

Published:
Updated:

ಬೆಂಗಳೂರು: ದಂಡುಪಾಳ್ಯ ಗ್ಯಾಂಗ್‌ನ ರೀತಿಯಲ್ಲೇ ನೀರು ಕೇಳುವ ನೆಪದಲ್ಲಿ ಮನೆಗಳಿಗೆ ನುಗ್ಗಿ ಸುಲಿಗೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಭಾರತಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಶಿವಾಜಿನಗರ ನಿವಾಸಿ ಫಾರೂಕ್, ನದೀಮ್, ರತನ್, ನದೀಮ್ ಅಹಮ್ಮದ್ ಹಾಗೂ ಜಾವೇದ್‌ ಅಲಿ ಬಂಧಿತರು. ಅವರಿಂದ ಎರಡು ಚಿನ್ನದ ಸರಗಳು, ಬೆಲೆಬಾಳುವ 14 ವಾಚ್‌ಗಳು ಹಾಗೂ ಒಂದು ಕ್ಯಾಮೆರಾವನ್ನು ಜಪ್ತಿ ಮಾಡಲಾಗಿದೆ. ಮಾರಕಾಸ್ತ್ರ, ಖಾರದ ಪುಡಿ, ದೊಣ್ಣೆ ಸಹ ಸಿಕ್ಕಿವೆ.

ಜಂಬೂ ಬಜಾರ್‌ ಪೆಟ್ರೋಲ್ ಬಂಕ್ ಬಳಿ ದರೋಡೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಆ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ ಪಿಎಸ್‌ಐ ನಯನಾ ನೇತೃತ್ವದ ತಂಡ, ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

‘ಆರೋಪಿಗಳು, ಬಾಲ್ಯ ಸ್ನೇಹಿತರು. ಮೋಜು– ಮಸ್ತಿಗೆ ಹಣ ಹೊಂದಿಸಲು ಕೃತ್ಯವೆಸಗುತ್ತಿದ್ದರು. ಎಚ್‌ಬಿಆರ್ ಬಡಾವಣೆಯ ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ಜೂನ್ 25ರಂದು ನುಗ್ಗಿದ್ದ ಆರೋಪಿಗಳು, ನೀರು ಕೇಳುವ ನೆಪದಲ್ಲಿ ಜೋನಾಥನ್ ಥಾಮಸ್ ಎಂಬುವರ ಮನೆಗೆ ನುಗ್ಗಿದ್ದರು. ಚಾಕು ತೋರಿಸಿ ಸುಲಿಗೆ ಮಾಡಿದ್ದರು. ಆ ಬಗ್ಗೆ ಜೋನಾಥನ್ ಅವರು ಹೆಣ್ಣೂರು ಠಾಣೆಗೆ ದೂರು ಕೊಟ್ಟಿದ್ದರು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !