ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಕೆಲಸ ಮಾಡಿದ್ದೆ. ಮೂಲಸೌಕರ್ಯದ ವಿಷಯದಲ್ಲಿ ಬೆಂಗಳೂರು ಹೈದರಾಬಾದ್ಗಿಂತ ಹಿಂದುಳಿದಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿ ಅವರು ಕೆಲಸ ಮಾಡಿದ್ದರು. ನಗರದ ಮೂಲಸೌಕರ್ಯ ಅಭಿವೃದ್ಧಿ, ದೇವನಹಳ್ಳಿಯಲ್ಲಿ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಾಲನೆ, ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಂತಹ ಕ್ರಾಂತಿಕಾರಿ ಕೆಲಸಗಳನ್ನು ಮಾಡಿದರು. ಇದರಿಂದಾಗಿಯೇ ಬೆಂಗಳೂರು ದೇಶದ ಮುಂಚೂಣಿ ನಗರಗಳಲ್ಲಿ ಒಂದಾಯಿತು.

ಸಾಂವಿಧಾನಿಕ ಆಡಳಿತ ಎಂಬುದಕ್ಕೆ ಕೃಷ್ಣ ಅವರು ಒಂದು ಉದಾಹರಣೆಯಂತಿದ್ದರು. ಅವರು ಸಂಪುಟ ಸಭೆ ನಡೆಸುತ್ತಿದ್ದ ಸ್ವರೂಪವೇ ಭಿನ್ನವಾಗಿತ್ತು. ಎಲ್ಲ ಸಚಿವರೂ ಜನರಿಗೆ ಉತ್ತರದಾಯಿಗಳಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಸಂಸತ್ತು ಮತ್ತು ವಿಧಾನಮಂಡಲದ ಎಲ್ಲ ನಾಲ್ಕು ಸದನಗಳ ಸದಸ್ಯರಾಗಿ ಕೆಲಸ ಮಾಡಿದ್ದ ಅವರು, ಆ ಅನುಭವವನ್ನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಮರ್ಪಕವಾಗಿ ಬಳಸಿಕೊಂಡರು.

ಕೃಷ್ಣ ಅವರಿಗೆ ಸಮಗ್ರ ಕರ್ನಾಟಕದ ಅಭಿವೃದ್ಧಿಯ ಕಲ್ಪನೆ ಇತ್ತು. ಈ ಕಾರಣಕ್ಕಾಗಿಯೇ ಅವರ ಅವಧಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಆದ್ಯತೆ ನೀಡಿದ್ದರು. ಜನಪರ ಯೋಜನೆಗಳ ವಿಷಯದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ದುರುದ್ದೇಶದ ವಿರೋಧಗಳು ಬಂದರೂ ಅಕ್ಷರ ದಾಸೋಹ ಯೋಜನೆಯನ್ನು ಹಟಕ್ಕೆ ಬಿದ್ದು ಅನುಷ್ಠಾನಗೊಳಿಸಿದ್ದು ಇದಕ್ಕೆ ಉದಾಹರಣೆ.

ಈಗಿನ ಬಹುತೇಕರು 24X7 ಗಂಟೆ ರಾಜಕಾರಣ ಮಾಡುತ್ತಾರೆ. ಆದರೆ, ಕೃಷ್ಣ ಅವರು ರಾಜಕಾರಣದ ಜೊತೆಯಲ್ಲೇ ವೈಯಕ್ತಿಕ ಜೀವನಕ್ಕೂ ಆದ್ಯತೆ ನೀಡುತ್ತಿದ್ದರು. ಕುಟುಂಬಕ್ಕೆ ನಿರ್ದಿಷ್ಟ ಸಮಯ ನೀಡುತ್ತಿದ್ದರು. ಸಂಗೀತ ಕೇಳುವುದು, ಟೆನಿಸ್ ಆಡುವುದು, ಓದು ಎಲ್ಲದಕ್ಕೂ ಅವರಲ್ಲಿ ಸಮಯವಿತ್ತು. ಊಟ, ತಿಂಡಿ, ದಿರಿಸು ಧರಿಸುವುದರಲ್ಲಿ ಅವರದ್ದೇ ಆದ ಶಿಸ್ತು ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.