₹10 ಲಕ್ಷ ಮೌಲ್ಯದ ರಕ್ತ ಚಂದನದ ತುಂಡು ವಶಕ್ಕೆ!

7

₹10 ಲಕ್ಷ ಮೌಲ್ಯದ ರಕ್ತ ಚಂದನದ ತುಂಡು ವಶಕ್ಕೆ!

Published:
Updated:

ಬೆಂಗಳೂರು: ಸರುಕು ಸಾಗಣೆ ವಾಹನದಲ್ಲಿ ರಕ್ತ ಚಂದನದ ತುಂಡುಗಳನ್ನು ಆಂಧ್ರದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಆರೋಪಿಗಳನ್ನು ಟಿನ್‌ ಫ್ಯಾಕ್ಟರಿ ಬಳಿ ನಾಲ್ವರನ್ನು ಮಹದೇವಪುರ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

‘ತಮಿಳುನಾಡು ಮೂಲದವರಾದ ಮಂಜುನಾಥ, ಗೋವಿಂದರಾಜು, ಸರವಣ, ಪಿ.ಗೋವಿಂದರಾಜು ಎಂಬುವರು ಬಂಧಿತ ಆರೋಪಿಗಳು. ₹ 10 ಲಕ್ಷ ಮೌಲ್ಯದ 14 ರಕ್ತ ಚಂದನದ ತುಂಡುಗಳನ್ನು ಮತ್ತು ವಾಹನವನ್ನು ಜಪ್ತಿ ಮಾಡಿದ್ದಾರೆ.

‘ಟಿನ್‌ ಫ್ಯಾಕ್ಟರಿ ವ್ಯಾಪ್ತಿಯಲ್ಲಿ ಕ್ಯಾಬ್‌ ಚಾಲಕರು, ಪ್ರಯಾಣಿಕರನ್ನು ಹತ್ತಿಸಿಕೊಂಡು ಸುಲಿಗೆ ಮಾಡುತ್ತಿದ್ದ ಪ್ರಕರಣಗಳು ಹೆಚ್ಚಾಗಿದ್ದವು. ಅವುಗಳನ್ನು ತಡೆಗಟ್ಟಲು ಅನುಮಾನಾಸ್ಪದ ಕ್ಯಾಬ್‌ ಗಳನ್ನು ತಪಾಸಣೆ ಮಾಡುತ್ತಿದ್ದೆವು. ಈ ವೇಳೆ ಆರೋಪಿಗಳ ವಾಹನ ಪರಿಶೀಲಿಸಲು ಹೋಗುತ್ತಿದ್ದಂತೆ ತಪ್ಪಿಸಿಕೊಳ್ಳಲು ಯತ್ನಿಸಿದರು. ತಪಾಸಣೆ ನಡೆಸಿದಾಗ ರಕ್ತ ಚಂದನದ ತುಂಡುಗಳು ಇದ್ದವು’ ಎಂದು ಪೊಲೀಸರು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !