ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಡೋಸ್ಕೋಪಿ: ಯಶಸ್ವಿ ಶಸ್ತ್ರಚಿಕಿತ್ಸೆ

Last Updated 3 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಹೃದಯ ಕವಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳ ಹಾಗೂ ಕರ್ನಾಟಕದ ಒಟ್ಟು ಮೂವರು ರೋಗಿಗಳಿಗೆ ಸಪ್ತಗಿರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವೈದ್ಯರು ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

‘ಪಶ್ಚಿಮಬಂಗಾಳದ 16 ವರ್ಷದ ಬಾಲಕಿ, ವಿಜಯಪುರದ 22 ವರ್ಷದ ಯುವಕ ಹಾಗೂ ಸುರಪುರದ 29 ವರ್ಷದ ಮಹಿಳೆ ಹೃದಯ ರೋಗದಿಂದ ಬಳಲುತ್ತಿದ್ದರು. ಹೃದಯ ಭಾಗದಲ್ಲಿ ಎರಡು ಇಂಚಿನಷ್ಟು ಕೊರೆದು ಎಂಡೋಸ್ಕೋಪಿ ವಿಧಾನದ ಮೂಲಕ ಕವಾಟದ ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಎಂದುಸಂಸ್ಥೆಯ ಹೃದಯತಜ್ಞ ಡಾ.ತಮೀಮ್ ಅಹ್ಮದ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕವಾಟ ಸರಿಪಡಿಸಲು ಸಾಧನಗಳ ಬದಲು ಬಟ್ಟೆಯಂತಹ ವಸ್ತು ಬಳಸಲಾಗಿದ್ದು, ಇದು ಅತ್ಯಂತ ವಿರಳ ಶಸ್ತ್ರಚಿಕಿತ್ಸೆಯಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT