ಕೌಶಲ ಅಭಿವೃದ್ಧಿ ತರಬೇತಿಗೆ ಚಾಲನೆ

7

ಕೌಶಲ ಅಭಿವೃದ್ಧಿ ತರಬೇತಿಗೆ ಚಾಲನೆ

Published:
Updated:
Deccan Herald

ಬೆಂಗಳೂರು: ಚೊಕ್ಕನಹಳ್ಳಿಯಲ್ಲಿರುವ ಮಣಿಪಾಲ್ ಗ್ಲೋಬಲ್ ಅಕಾಡೆಮಿಯ ಸಹಯೋಗದೊಂದಿಗೆ ಎಚ್‌ಡಿಎಫ್‌ಸಿ ಜನರಲ್ ಇನ್‌ಶ್ಯೂರೆನ್ಸ್‌ ಕಂಪನಿಯು ಪದವೀಧರರಿಗಾಗಿ ಒಂದು ವರ್ಷದ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿತು.

ಕಂಪನಿಯ ಕಾರ್ಯಕಾರಿ ಮಂಡಳಿ ಸದಸ್ಯ ಪಾರ್ಥನೀಲ್ ಘೋಷ್ ಮಾತನಾಡಿ, ‘ಸಾಮಾನ್ಯ ವಿಮಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಆಸಕ್ತರಿಗೆ  ಗುಣಮಟ್ಟದ ಶಿಕ್ಷಣ ಮತ್ತು ಕೌಶಲಗಳ ಕುರಿತು ತರಬೇತಿ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

‘ಈ ಕಾರ್ಯಕ್ರಮದ ಮೂಲಕ ಪ್ರತಿಭೆಯನ್ನು ಪೋಷಿಸುವ ಮತ್ತು ಬೆಳವಣಿಗೆಯ ಅವಕಾಶಗಳನ್ನು ಒದಗಿಸುವ ವಿಶ್ವಾಸವಿದೆ. ಮಣಿಪಾಲ ಜಾಗತಿಕ ಶಿಕ್ಷಣ ಸೇವೆಗಳೊಂದಿಗೆ ನಮ್ಮ ಸಹಯೋಗವು ಈ ನಿಟ್ಟಿನಲ್ಲಿ ಒಂದು ಮಹತ್ತರ ಹೆಜ್ಜೆಯಾಗಿದೆ. ಈ ಮೂಲಕ ವಿಮಾ ಕ್ಷೇತ್ರದಲ್ಲಿ ಪ್ರತಿಭೆಯ ಸಮೂಹವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ' ಎಂದರು.

ಮಣಿಪಾಲ್ ಗ್ಲೋಬಲ್ ಅಕಾಡೆಮಿಯ ಔದ್ಯಮಿಕ ವಹಿವಾಟು ವಿಭಾಗದ ಉಪಾಧ್ಯಕ್ಷ ಬಿಮಲ್ ಜಿತ್ ಭಾಸಿನ್ ಮಾತನಾಡಿ, ‘ಹಲವು ವರ್ಷಗಳಿಂದಲೂ ನಮ್ಮ ಅಕಾಡೆಮಿಯ ಆವರಣದಲ್ಲಿ ಅನೇಕ ಸಂಸ್ಥೆಗಳು ಹಮ್ಮಿಕೊಂಡಿರುವ ಹಲವಾರು ತರಬೇತಿ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಉನ್ನತ ಕೌಶಲದ ಕಾರ್ಯಪಡೆಯನ್ನು ಸೆಳೆಯಲು ನೆರವಾಗಿದ್ದೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !