ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿ.ವಿಗೆ ‘ಸೌರಶಕ್ತಿ’

495 ಕಿಲೋವಾಟ್‌ ಸಾಮರ್ಥ್ಯದ ಘಟಕ ಉದ್ಘಾಟನೆ
Last Updated 30 ಸೆಪ್ಟೆಂಬರ್ 2019, 19:48 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ ಆವರಣದಲ್ಲಿ ಅಳವಡಿಸಿರುವ, 495 ಕಿಲೋವಾಟ್‌ ವಿದ್ಯುತ್‌ ಉತ್ಪಾದಿಸುವ ಸೌರ ವಿದ್ಯುತ್‌ ಘಟಕವನ್ನು ಸೋಮವಾರ ಉದ್ಘಾಟಿಸಲಾಗಿದ್ದು, ಈ ಮೂಲಕ ವಿದ್ಯುತ್‌ ಸ್ವಾವಲಂಬನೆ ಸಾಧಿಸಿದ ದೇಶದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್‌ ಅವರು ಸೌರಶಕ್ತಿ ಘಟಕ ಉದ್ಘಾಟಿಸಿದರು. ವಿಶ್ವವಿದ್ಯಾಲಯಕ್ಕೆ ಪ್ರತಿದಿನ ಸರಾಸರಿ 500 ಕಿಲೋವಾಟ್‌ನಷ್ಟು ವಿದ್ಯುತ್ ಅಗತ್ಯವಿದ್ದು, ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಉತ್ಪಾದಿಸುವ ವಿದ್ಯುತ್‌ನಿಂದ ವಿವಿಯ ಬೇಡಿಕೆಯನ್ನು ಸೌರ ಘಟಕ ಬಹುತೇಕ ಈಡೇರಿಸಲಿದೆ.

ಕ್ಯಾಂಪಸ್‌ನ 6ಕಟ್ಟಡಗಳ ಚಾವಣಿಯಲ್ಲಿ ಸುಮಾರು 50 ಸಾವಿರ ಚದರ ಅಡಿಯಲ್ಲಿ ಥಿಂಕ್ ಎನರ್ಜಿ ಸಂಸ್ಥೆಯ ಸಹಯೋಗದಲ್ಲಿ ಸೌರ ಫಲಕಗಳನ್ನುಅಳವಡಿಸಲಾಗಿದೆ.

ಈ ಮೊದಲು ವಿಶ್ವವಿದ್ಯಾಲಯವು ಪ್ರತಿ ಯೂನಿಟ್‌ಗೆ ₹7.15 ದರದಲ್ಲಿ ಬೆಸ್ಕಾಂನಿಂದ ವಿದ್ಯುತ್ ಪಡೆಯುತ್ತಿತ್ತು. ಇದೀಗ ಸೌರ ವಿದ್ಯುತ್ ಅನ್ನು ಬೆಸ್ಕಾಂ ಗ್ರಿಡ್‌ಗೆ ಕಳುಹಿಸಿ, ಬೆಸ್ಕಾಂನಿಂದ ಪ್ರತಿ ಯೂನಿಟ್‌ಗೆ ₹ 3.83 ದರದಲ್ಲಿ ವಿದ್ಯುತ್‌ ಖರೀದಿಸುವುದು ಸಾಧ್ಯ. ಇದರಿಂದ ಒಟ್ಟಾರೆ ವಿದ್ಯುತ್‌ ಬಿಲ್‌ನಲ್ಲಿ ಶೇ 50ರಷ್ಟು ಉಳಿತಾಯವಾಗಲಿದೆ.

ಸೌರಶಕ್ತಿ ಉತ್ಪಾದನೆಯಿಂದಾಗಿ ವಾತಾವರಣದಲ್ಲಿ ಪ್ರತಿ ವರ್ಷ 790 ಟನ್ ಇಂಗಾಲದ ಡೈಆಕ್ಸೈಡ್‍ನ ಪ್ರಮಾಣ ಕಡಿಮೆ ಆಗಲಿದೆ. 1,112 ಎಕರೆ ಪ್ರದೇಶದಲ್ಲಿರುವ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿಇನ್ನೂ 2 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಬಹುದಾದ ಕಟ್ಟಡಗಳ ಚಾವಣಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT