ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಮಾಲಿನ್ಯ ನಿಯಂತ್ರಣಾ ಸಾಧನ ಬಿಡುಗಡೆ

Last Updated 12 ಫೆಬ್ರುವರಿ 2022, 20:51 IST
ಅಕ್ಷರ ಗಾತ್ರ

ಬೆಂಗಳೂರು: ವಾಯು ಮಾಲಿನ್ಯ ಕಡಿಮೆ ಮಾಡಲು ನಗರದ ದಯಾನಂದಸಾಗರ ಎಂಜಿನಿಯರಿಂಗ್‌ ಕಾಲೇಜಿನ ಆಟೊಮೊಬೈಲ್ ವಿಭಾಗ ಮಾಲಿನ್ಯ ನಿಯಂತ್ರಣ ಸಾಧನ ಅಭಿವೃದ್ಧಿಪಡಿಸಿದೆ. ಕಾಲೇಜಿನ ಆಡಳಿತ ಮಂಡಳಿ ಸದಸ್ಯ ರೋಹನ್ ಪ್ರೇಮ್ ಸಾಗರ್ ಅವರು ಸಾಧನವನ್ನು ಲೋಕಾರ್ಪಣೆ ಮಾಡಿದರು.

ಈ ಸಾಧನವು ಗಾಳಿಯಲ್ಲಿನ ಅಶುದ್ಧ ಹಾಗೂ ವಿಷಕಾರಿ ಕಣಗಳನ್ನು ಹೀರುತ್ತದೆ. ಶುದ್ಧ ಗಾಳಿ ಬಿಡುಗಡೆ ಮಾಡುತ್ತದೆ. ದಿನಕ್ಕೆ 6 ಸಾವಿರ ಘನ ಮೀಟರ್ ಗಾಳಿಯನ್ನು ಶುದ್ಧಗೊಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದು 2.5 ರಿಂದ 1 ಸಾವಿರ ಮೈಕ್ರಾನ್‌ಗಳ ಕಣಗಳ ಗಾತ್ರವನ್ನು ಸೆರೆ ಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಾಲೇಜಿನ ಆಟೊಮೊಬೈಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಚ್.ಎನ್. ಸುರೇಶ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT