ಶಿಕ್ಷಕನಿಗೆ ರಂಗಭೂಮಿ ಪರಿಚಯ ಅತ್ಯಗತ್ಯ: ರಂಗತಜ್ಞ ಡಾ.ಎ.ಆರ್.ಗೋವಿಂದ ಸ್ವಾಮಿ

7

ಶಿಕ್ಷಕನಿಗೆ ರಂಗಭೂಮಿ ಪರಿಚಯ ಅತ್ಯಗತ್ಯ: ರಂಗತಜ್ಞ ಡಾ.ಎ.ಆರ್.ಗೋವಿಂದ ಸ್ವಾಮಿ

Published:
Updated:
Deccan Herald

ಬೆಂಗಳೂರು: ‘ಶಿಕ್ಷಕನಿಗೆ ರಂಗಭೂಮಿ ಪರಿಚಯ ಅತ್ಯಗತ್ಯವಾಗಬೇಕು. ಆಧುನಿಕ ರಂಗಭೂಮಿಯ ತಂತ್ರಗಳನ್ನು ಶಿಕ್ಷಣದಲ್ಲಿ ಸಮರ್ಥವಾಗಿ ಬಳಸಿಕೊಂಡು ಬೋಧನೆ ಮಾಡಬೇಕು’ ಎಂದು ರಂಗತಜ್ಞ ಡಾ.ಎ.ಆರ್.ಗೋವಿಂದ ಸ್ವಾಮಿ ಹೇಳಿದರು. 

ಸೆಂಟ್ ಜೋಸೆಫ್‌ ಸಂಜೆ ಕಾಲೇಜು ಭಾನುವಾರ ಆಯೋಜಿಸಿದ್ದ ‘ಅಂತರ–ಕಾಲೇಜು ಸಾಂಸ್ಕೃತಿಕ ಉತ್ಸವ- ನವರಸ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಕಲಿಯುವ ಪಠ್ಯ ಸುಲಭವಾಗಿ ಅರ್ಥವಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ರಂಗಭೂಮಿಯ ತಂತ್ರಗಳನ್ನು ಶಿಕ್ಷಣದಲ್ಲಿ ಸಮರ್ಥವಾಗಿ ಬಳಸಿಕೊಂಡು ಬೋಧನೆ ಮಾಡಿದರೆ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ತೋರಿ, ಹೊಸ ಬದಲಾವಣೆಗಳತ್ತ ಮುಖ ಮಾಡುತ್ತಾರೆ’ ಎಂದು ಹೇಳಿದರು.

‘ನಾಟಕದ ಮುಖ್ಯ ಉದ್ದೇಶ ಮನರಂಜನೆಯಾಗಿದ್ದರೂ, ಗಂಭೀರ ವಿಚಾರಗಳತ್ತ ಪ್ರೇಕ್ಷಕರ ಗಮನ ಸೆಳೆದು ಅವರನ್ನು ಚಿಂತನಾಶೀಲರನ್ನಾಗಿ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ರಂಗಭೂಮಿಯ ಮೂಲಕ ವಿದ್ಯಾರ್ಥಿಗಳನ್ನು ಚಿಂತನೆಗೊಳಪಡಿಸಿ, ಪ್ರಶ್ನಿಸುವ ಧೈರ್ಯವನ್ನು ಮೂಡಿಸಬಹುದಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !