ಭಾನುವಾರ, ಏಪ್ರಿಲ್ 18, 2021
25 °C

‘ಸ್ವರ್ಣ ವಿಜಯ ದಿವಸ್’ ಸಂಭ್ರಮ ಸೇನಾನಿಗಳಿಗೆ ಸಿ.ಎಂ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 1971ರ ಇಂಡೋ ಪಾಕ್ ಯುದ್ಧದ 50 ವರ್ಷದ ಸ್ಮರಣೆಯ ಅಂಗವಾಗಿ ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ಮಂಗಳವಾರ ನಡೆದ ‘ಸ್ವರ್ಣ ವಿಜಯ ವರ್ಷ’ ಕಾರ್ಯಕ್ರಮದಲ್ಲಿ, ಅಂದು ಯುದ್ದದಲ್ಲಿ ಹೋರಾಡಿ ಪ್ರಶಸ್ತಿ ಪುರಸ್ಕೃತರಾಗಿದ್ದ ಸೇನಾನಿಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ‘ದೇಶದ ಮಣ್ಣಿನ ವೀರ ಸೇನಾನಿಗಳಿಗೆ ಗೌರವ ಅರ್ಪಿಸುವ ಸುಸಂದರ್ಭವಿದು’ ಎಂದರು.

‘ಯುದ್ದದಲ್ಲಿ ಭಾರತ ಜಯಿಸಿ 50 ವರ್ಷ ತುಂಬಿದೆ. ಆ ಸ್ಮರಣೆಯ ಆಚರಣೆಗೆ ಪ್ರಧಾನಿ ಕಳೆದ ಡಿ. 16 ರಂದು ಚಾಲನೆ ನೀಡಿದ್ದಾರೆ. ಈ ವಿಜಯ ದೀಪವು ರಾಜ್ಯದಲ್ಲಿ ಮಾರ್ಚ್ 5ರವರೆಗೆ ಇರಲಿದೆ. ದೇಶದಲ್ಲಿ ವರ್ಷವಿಡೀ ಸ್ವರ್ಣ ವಿಜಯ ವರ್ಷಾಚರಣೆ ನಡೆಯಲಿದೆ’ ಎಂದರು.

ಯುದ್ಧದಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕಮಾಂಡರ್ ಜೆಪಿಎ ನರೋನ್ಹಾ ಬದಲಿಗೆ ಮಹಾವೀರ ಚಕ್ರ ಪಡೆದಿದ್ದ ಅವರ ಪತ್ನಿ ತೆರೇಸಾ ನರೋನ್ಹಾ, ನೌಕಾಪಡೆ ಅಡ್ಮಿರಲ್ ಸಂತೋಷ್ ಕುಮಾರ್ ಗುಪ್ತ ಅವರು ಮಹಾವೀರ ಚಕ್ರ, ಮೇಜರ್ ಜನರಲ್ ಕುಪ್ಪಂದ ಪೊನ್ನಪ್ಪ ನಂಜಪ್ಪ ಅವರು ವೀರಚಕ್ರ, ಬ್ರಿಗೇಡ್ ಪಿ.ವಿ. ಸಹದೇವನ್ ಅವರು ವೀರಚಕ್ರ, ಅಡ್ಮಿರಲ್ ರಿಷಿರಾಜ್ ಸೂದ್ ಅವರು ವೀರಚಕ್ರ, ಲೆಫ್ಟಿನೆಂಟ್ ಕೇಶವ್ ಸಿಂಗ್ ಪನ್ವರ್ ಅವರು ವೀರಚಕ್ರ ವಿಮಾನ ಲೆಫ್ಟಿನೆಂಟ್ ಅಸ್ಪಾರಿ ರಘುನಾಥನ್ ಅವರು ವೀರಚಕ್ರ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದು, ಅವರನ್ನು ಮುಖ್ಯಮಂತ್ರಿ ಸನ್ಮಾನಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು