ಕಾರಿನಲ್ಲಿದ್ದ ₹7 ಲಕ್ಷ ಕಳವು

7

ಕಾರಿನಲ್ಲಿದ್ದ ₹7 ಲಕ್ಷ ಕಳವು

Published:
Updated:

ಬೆಂಗಳೂರು: ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಉದ್ಯಮಿಯೊಬ್ಬರ ಕಾರಿನಲ್ಲಿದ್ದ ₹7 ಲಕ್ಷ ದೋಚಿ ‌ಪರಾರಿಯಾಗಿದ್ದಾರೆ.

ರೇಸ್‌ಕೋರ್ಸ್ ರಸ್ತೆಯ ಮೌರ್ಯ ಹೋಟೆಲ್ ಬಳಿ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ದಾವಣಗೆರೆಯ ರಾಮಮೂರ್ತಿ ಎಂಬುವರು ಹೈಗ್ರೌಂಡ್ಸ್ ಠಾಣೆಗೆ ದೂರು ಕೊಟ್ಟಿದ್ದಾರೆ.

ಕೆಲಸದ ನಿಮಿತ್ತ ಸೋಮವಾರ ನಗರಕ್ಕೆ ಬಂದಿದ್ದ ರಾಮಮೂರ್ತಿ, ಮೌರ್ಯ ಹೋಟೆಲ್‌ನಲ್ಲಿ ತಂಗಿದ್ದರು. ಗುರುವಾರ ರಾತ್ರಿ ದಾವಣಗೆರೆಗೆ ವಾಪಸ್ ಹೊರಡಲು ಲಗೇಜ್‌ಗಳನ್ನು ಕಾರಿನಲ್ಲಿಟ್ಟು, ಬಿಲ್ ಪಾವತಿಸಲು ಹೋಟೆಲ್ ಕೌಂಟರ್ ಬಳಿ ತೆರಳಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು, ಸೂಟ್‌ಕೇಸ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

‘ನನ್ನ ಚಾಲಕ ಕಾರಿನ ಒಳಗೇ ಇದ್ದ. ಹೀಗಾಗಿ, ಲಾಕ್ ಮಾಡಿರಲಿಲ್ಲ. ಸೂಟ್‌ಕೇಸ್‌ನಲ್ಲಿ ₹ 7 ಲಕ್ಷ ಹಣ ಹಾಗೂ ಕೆಲವು ಮಹತ್ವದ ದಾಖಲೆಗಳಿದ್ದವು’ ಎಂದು ರಾಮಮೂರ್ತಿ ಹೇಳಿಕೆ ಕೊಟ್ಟಿದ್ದಾರೆ. ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ ಎಂದು ಹೈಗ್ರೌಂಡ್ಸ್ ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !