ಅರಣ್ಯವಾಸಿ ಬುಡಕಟ್ಟುಗಳಿಗೆ ಭೂಮಿ ವರ್ಗಾವಣೆ: ಎಂ.ಲಕ್ಷ್ಮೀನಾರಾಯಣ

7
ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಯೋಜನೆ ಜಾರಿ

ಅರಣ್ಯವಾಸಿ ಬುಡಕಟ್ಟುಗಳಿಗೆ ಭೂಮಿ ವರ್ಗಾವಣೆ: ಎಂ.ಲಕ್ಷ್ಮೀನಾರಾಯಣ

Published:
Updated:
Deccan Herald

ಬೆಂಗಳೂರು: ‘ಅರಣ್ಯ ಪ್ರದೇಶಗಳಲ್ಲಿನ ಬುಡಕಟ್ಟು ಸಮುದಾಯಗಳು ಎರಡು ಎಕರೆ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದರೆ, ಅಂತವರಿಗೆ ಭೂಮಿ ವರ್ಗಾವಣೆ ಮಾಡಲಾಗುತ್ತಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ತಿಳಿಸಿದರು. 

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಆದಿವಾಸಿ ಬುಡಕಟ್ಟು ಕಲ್ಯಾಣ ಸಚಿವಾಲಯ, ಕರ್ನಾಟಕ ವಸತಿ ಶೈಕ್ಷಣಿಕ  ಸಂಸ್ಥೆಗಳ ಸೊಸೈಟಿ ಶುಕ್ರವಾರ ಆಯೋಜಿಸಿದ್ದ ‘ರಾಷ್ಟ್ರೀಯ ಪೋಷಣ ಮಹಾ’ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 

‘ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಇಂತಹದೊಂದು ಯೋಜನೆ ಇದೆ. ಈಗಾಗಲೇ ಸರ್ಕಾರ 46 ಸಾವಿರ ಎಕರೆ ಭೂಮಿಯನ್ನು ಬುಡಕಟ್ಟು ಜನಾಂಗಗಳಿಗೆ ವರ್ಗಾವಣೆ ಮಾಡಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವರ್ಗಾವಣೆ ಇನ್ನೂ ಬಾಕಿ ಇದೆ’ ಎಂದು ತಿಳಿಸಿದರು.

‘ಜನಾಂಗಕ್ಕೆ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿಯಿಲ್ಲ. ಹಾಗಾಗಿ ಪೌಷ್ಠಿಕಾಂಶದ ಕೊರತೆ ಅತಿಯಾಗಿದೆ. ಆರು ತಿಂಗಳಿಗಾಗುವಷ್ಟು ಪೌಷ್ಠಿಕ ಆಹಾರವನ್ನು ಸರ್ಕಾರದಿಂದ ನೀಡುಲಾಗುತ್ತಿದೆ. ಕಾಡು ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡಲು ಸಮರ್ಪಕ ವ್ಯವಸ್ಥೆ ರೂಪಿಸಲಾಗುವುದು’ ಎಂದರು.

‘ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಮೊಬೈಲ್ ಆರೋಗ್ಯ ಘಟಕಗಳನ್ನು ಪ್ರಾರಂಭಿಸಲಾಗಿದೆ. ಜನಾಂಗಗಳ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿದ ಯೋಜನೆಗಳನ್ನು ಸದುಪಯೋಗ‍ಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಯಾ ಇಲಾಖೆಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !