ಬೆಂಗಳೂರು: ವಚನಜ್ಯೋತಿ ಬಳಗವು ದೊಡ್ಡಬಸ್ತಿ ರಸ್ತೆಯ ಕಲ್ಯಾಣ ಪಟ್ಟಣದಲ್ಲಿ ವಚನ ನವರಾತ್ರಿಯನ್ನು ಅಕ್ಟೋಬರ್ 3ರಿಂದ 12ರವರೆಗೆ ಆಯೋಜಿಸಿದೆ.
ಪ್ರತಿದಿನ ಒಬ್ಬ ವಚನಕಾರ್ತಿಯ ಪರಿಚಯ, ಅವರ ವಚನಗಳ ನಿರ್ವಚನ ಹಾಗೂ ಗಾಯನಗಳನ್ನು ನಡೆಸಲಾಗುವುದು. ವಚನ ಕಲಿಕಾ ವಿದ್ಯಾರ್ಥಿಗಳು ವಚನಕಾರ್ತಿಯರ ಪರಿಚಯ ಮಾಡಿಕೊಡಲಿದ್ದಾರೆ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ತಿಳಿಸಿದ್ದಾರೆ.
ಕನ್ನಡ ಪ್ರಾಧ್ಯಾಪಕರಾದ ಎಲ್.ಜಿ.ಮೀರಾ, ರುದ್ರೇಶ್ ಅದರಂಗಿ, ನಾಗವೇಂದ್ರಸ್ವಾಮಿ ಚಿದರವಳ್ಳಿ, ಕವಿ ಗುಂಡೀಗೆರೆ ವಿಶ್ವನಾಥ್, ಪ್ರಭು ಇಸುವನಹಳ್ಳಿ ಅವರು ವಚನ ನಿರ್ವಚನ ಮಾಡಲಿದ್ದಾರೆ. ವಚನ ಸಂಗೀತವನ್ನು ವಿವಿಧ ಅಕ್ಕನ ಬಳಗ
ಗಳು ನಡೆಸಿಕೊಡಲಿವೆ ಎಂದಿದ್ದಾರೆ. ಮಾಹಿತಿಗೆ: 98451 84267.