ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಪಾರ್ಕಿಂಗ್: ಗಂಟೆಗೆ ₹ 1 ಸಾವಿರ ಶುಲ್ಕ

Published 7 ಮಾರ್ಚ್ 2024, 19:04 IST
Last Updated 7 ಮಾರ್ಚ್ 2024, 19:04 IST
ಅಕ್ಷರ ಗಾತ್ರ

ಬೆಂಗಳೂರು: ‘ಯುಬಿ ಸಿಟಿ ಬಹುಮಹಡಿ ಕಟ್ಟಡದಲ್ಲಿ ವಾಹನ ನಿಲುಗಡೆಗೆ ಪ್ರತಿ ಗಂಟೆಗೆ
₹ 1 ಸಾವಿರ ಶುಲ್ಕ ವಿಧಿಸಲಾಗುತ್ತಿದೆ’ ಎಂಬ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

‘ಪ್ರೀಮಿಯಂ ಪಾರ್ಕಿಂಗ್ ₹ 1,000 / ಪ್ರತಿ ಗಂಟೆಗೆ’ ಎಂಬ ಬರಹವುಳ್ಳ ಫಲಕದ ಫೋಟೊವನ್ನು ಇಶಾನ್ ವೈಷ್ ಎಂಬುವವರು ಸಾಮಾಜಿಕ ಮಾಧ್ಯಮದ ತಮ್ಮ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೆಲವರು, ‘ಇಲ್ಲಿ ವಾಹನ ನಿಲ್ಲಿಸಲು ಜೇಬು ಗಟ್ಟಿಯಾಗಿರಬೇಕು’ ಎಂದು ಬರೆದುಕೊಂಡಿದ್ದಾರೆ.

‘ಬೆಂಗಳೂರಿನಲ್ಲಿ ವಾಹನ ನಿಲುಗಡೆಯದ್ದು ದೊಡ್ಡ ಸಮಸ್ಯೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಕೆಲವರು, ಪ್ರತಿ ಗಂಟೆಗೆ ₹ 10, ₹ 20, ₹ 100 ಹಾಗೂ ₹200 ಶುಲ್ಕ ವಿಧಿಸಿರುವುದನ್ನು ನೋಡಿದ್ದೇವೆ. ಆದರೆ, ಯುಬಿ ಸಿಟಿಯಲ್ಲಿ ಪ್ರತಿ ಗಂಟೆಗೆ ₹ 1 ಸಾವಿರ ಶುಲ್ಕ ವಿಧಿಸಲಾಗುತ್ತಿದೆ. ಇದು ಆಶ್ಚರ್ಯ ಉಂಟು ಮಾಡಿದೆ’ ಎಂದು ಸಾರ್ವಜನಿಕರೊಬ್ಬರು ಹೇಳಿದ್ದಾರೆ.

ದಟ್ಟಣೆ ಪ್ರದೇಶ: ‘ನಗರದ ಹೃದಯ ಭಾಗದಲ್ಲಿರುವ ಪ್ರದೇಶದಲ್ಲಿ ಯುಬಿ ಸಿಟಿ ಇದೆ. ಜೊತೆಗೆ, ಇಲ್ಲಿ ನಿತ್ಯವೂ ವಾಹನಗಳ ದಟ್ಟಣೆ ಇರುತ್ತದೆ. ಇದೇ ಕಾರಣಕ್ಕೆ ಯುಬಿ ಸಿಟಿ ಪಾರ್ಕಿಂಗ್ ನಿರ್ವಹಣೆ ಮಾಡುವವರು, ₹ 1,000 ಶುಲ್ಕ ವಿಧಿಸುತ್ತಿದ್ದಾರೆ’ ಎಂದು ಸಾರ್ವಜನಿಕರೊಬ್ಬರು ಪೋಸ್ಟ್ ಮಾಡಿದ್ದಾರೆ.

ಕಂತಿನಲ್ಲಿ ಪಾವತಿ: ‘ಗಂಟೆಗೆ ₹ 1 ಸಾವಿರ ಪಾವತಿಸಲು ಆಗದಿದ್ದರೆ, ತಿಂಗಳ ಕಂತಿನಲ್ಲೂ ಪಾವತಿಸಬಹುದು’ ಎಂದು ಕೆಲವರು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT