ಸೋಮವಾರ, ನವೆಂಬರ್ 18, 2019
25 °C

ವಿಧಾನಸೌಧದ ಕೊಠಡಿಯಲ್ಲಿ ಬೆಂಕಿ

Published:
Updated:
Prajavani

ಬೆಂಗಳೂರು: ವಿಧಾನಸೌಧದ ಎರಡನೇ ಮಹಡಿಯಲ್ಲಿ, ಆರ್ಥಿಕ ಇಲಾಖೆಯ ಕೊಠಡಿಯಲ್ಲಿ ವಿದ್ಯುತ್‌ ಶಾರ್ಟ್ ಸರ್ಕೀಟ್‌ನಿಂದಾಗಿ ಬುಧವಾರ ರಾತ್ರಿ ಬೆಂಕಿ ಕಾಣಿಸಿಕೊಂಡು ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಯಿತು.

ರಾತ್ರಿ ಎಂಟು ಗಂಟೆ ಸುಮಾರಿಗೆ ಕೊಠಡಿ ಸಂಖ್ಯೆ 203 ಮತ್ತು 203 (ಎ)ರಲ್ಲಿ ಸ್ಫೋಟದ ಶಬ್ದದೊಂದಿಗೆ ಬೆಂಕಿ ಕಾಣಿಸಿಕೊಂಡಿದೆ. ಅದರಿಂದ ಆತಂಕಗೊಂಡ ಭದ್ರತಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದಾರೆ. 203 (ಎ)ನಲ್ಲಿ ಎಸಿ ಚೇಂಬರ್ ಇದ್ದು, ಅಲ್ಲಿನ ಶಾರ್ಟ್ ಸರ್ಕೀಟ್‌ ಉಂಟಾಗಿತ್ತು. ಮಾಹಿತಿ ಸಿಕ್ಕಿದ ತಕ್ಷಣ ವಿಧಾನಸೌಧ ಭದ್ರತಾ ವಿಭಾಗದ ಅಧಿಕಾರಿಗಳು, ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ.

ಕೊಠಡಿಯಲ್ಲಿದ್ದ ಯಾವುದೇ ಕಡತಗಳಿಗೆ ಹಾನಿ ಆಗಿಲ್ಲ. ಆದರೆ, ಕಿಟಕಿಗೆಬೆಂಕಿ ತಗುಲಿದ್ದು, ಟೆಲಿಫೋನ್ ವೈರ್‌ಗಳು ಸುಟ್ಟು ಕರಕಲಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)