ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಪ್ರಕರಣ: ಪಾಲಿಗ್ರಾಫ್ ಪರೀಕ್ಷೆಗೆ ಅವಕಾಶ ನಿರಾಕರಣೆ

Last Updated 12 ಮಾರ್ಚ್ 2021, 20:06 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣ ಆರೋಪಿ ವಿರೇನ್ ಖನ್ನಾ ಅವರನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ಸಿಸಿಬಿ ಪೊಲೀಸರಿಗೆ ಅವಕಾಶ ನೀಡಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತು.

‘ಯಾವುದೇ ವ್ಯಕ್ತಿಯ ಒಪ್ಪಿಗೆ ಪಡೆಯದೆ ಪಾಲಿಗ್ರಾಫ್ ಪರೀಕ್ಷೆ ನಿರ್ವಹಿಸಲು ಆಗುವುದಿಲ್ಲ’ ಎಂದು ತಿಳಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ, ಮೊಬೈಲ್ ಫೋನ್ ಮತ್ತು ಇ–ಮೇಲ್ ಪಾಸ್‌ವರ್ಡ್ ತಿಳಿಸಿ ತನಿಖೆಗೆ ಸಹಕಾರ ನೀಡುವಂತೆ ವಿರೇನ್ ಖನ್ನಾಗೆ ತಿಳಿಸಿತು.

ಸ್ಮಾರ್ಟ್‌ಫೋನ್ ಮತ್ತು ಇ–ಮೇಲ್ ಖಾತೆಗಳನ್ನು ಶೋಧಿಸುವ ಮುನ್ನ ಪ್ರಾಸಿಕ್ಯೂಷನ್ ಅವರು ವಾರಂಟ್ ಕೋರಿ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ. ಒಮ್ಮೆ ವಾರಂಟ್ ಹೊಡಿಸಿದ ಬಳಿಕ ಪಾಸ್‌ವರ್ಡ್ ಒದಗಿಸುವುದು ಆರೋಪಿಗಳಿಗೆ ಬಿಟ್ಟದ್ದು. ಅವರು ಪಾಸ್‌ವರ್ಡ್‌ ನೀಡದಿದ್ದರೆ ಅದನ್ನು ಅನ್‌ಲಾಕ್ ಮಾಡಲು ನ್ಯಾಯಾಲಯ ಸಂಬಂಧಿಸಿದ ಕಂಪನಿಗೆ ನಿರ್ದೇಶನ ನೀಡಬಹುದು ಅಥವಾ ಹ್ಯಾಕ್ ಮಾಡಲು ತನಿಖಾಧಿಕಾರಿಗೆ ಅನುಮತಿ ನೀಡಬಹುದು. ಈ ಪ್ರಕ್ರಿಯೆ ಹೇಗಿರಬೇಕು ಎಂಬುದರ ಕುರಿತು ಪೊಲೀಸ್ ಇಲಾಖೆ ವಿವರವಾದ ಮಾರ್ಗಸೂಚಿ ಸಿದ್ಧಪಡಿಸಬೇಕು ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT