ಎಂಜಿನಿಯರಿಂಗ್‌ ಕಾಲೇಜು ಮಾನ್ಯತೆ: ವಿಟಿಯು ಸ್ಪಷ್ಟನೆ

7

ಎಂಜಿನಿಯರಿಂಗ್‌ ಕಾಲೇಜು ಮಾನ್ಯತೆ: ವಿಟಿಯು ಸ್ಪಷ್ಟನೆ

Published:
Updated:

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿಯ (ವಿಟಿಯು) ಕಾಯ್ದೆ 1994 ಹಾಗೂ ಎಐಸಿಟಿಇ ಕಾಯ್ದೆ 1987ರ ಪ್ರಕಾರ, ತಾಂತ್ರಿಕ ಮಹಾವಿದ್ಯಾಲಯಗಳು ಮಾನ್ಯತೆ ಮುಂದುವರಿಸಲು ಕೆಲವು ಕಡ್ಡಾಯ ನಿಯಮಾವಳಿಗಳನ್ನು ಪಾಲಿಸುವುದು ಅವಶ್ಯ ಎಂದು ವಿಟಿಯು ಕುಲಸಚಿವರು ತಿಳಿಸಿದ್ದಾರೆ.

‘ಸಂಯೋಜಿತ ತಾಂತ್ರಿಕ ಮಹಾವಿದ್ಯಾಲಯಗಳು ಅವಶ್ಯವಿರುವ ಭೂ ಪ್ರದೇಶ, ತರಗತಿ ಕೊಠಡಿಗಳು, ಗ್ರಂಥಾಲಯ, ಅರ್ಹ ಬೋಧಕರು, ಪ್ರಯೋಗಾಲಯದ ಸೌಲಭ್ಯಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಕಾಲೇಜುಗಳ ಕಾರ್ಯ ನಿರ್ವಹಣೆಯನ್ನು ನಿಯಂತ್ರಿಸುವ ಜವಾಬ್ದಾರಿ ವಿಶ್ವವಿದ್ಯಾಲಯಕ್ಕೆ ಇದೆ. ಸಮರ್ಪಕ ಕಾರ್ಯನಿರ್ವಹಣೆಯನ್ನು ದೃಢಪಡಿಸುವುದಕ್ಕಾಗಿ ವಿಶ್ವವಿದ್ಯಾಲಯದ ವತಿಯಿಂದ ಪ್ರತಿ ವರ್ಷ ಸ್ಥಳೀಯ ವಿಚಾರಣಾ ಸಮಿತಿಗಳನ್ನು ನೇಮಿಸಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !