ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘₹5.70 ಕೋಟಿ ವಿದ್ಯಾರ್ಥಿವೇತನ’

‘ಆತ್ಮತೃಷ – ಸಾಂಸ್ಕೃತಿಕ ಟೆಕ್ನೊ’ ಹಬ್ಬ ಮಾ. 5ರಿಂದ ಶುರು: ದೊರೆಸ್ವಾಮಿ
Last Updated 27 ಫೆಬ್ರುವರಿ 2020, 20:28 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಸಕ್ತ ವರ್ಷದಲ್ಲಿ 4,362 ಪ್ರತಿಭಾವಂತರಿಗೆ ₹5.70 ಕೋಟಿ ಯಷ್ಟು ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಇದು ಕಳೆದ ವರ್ಷ ನೀಡಿದ್ದ ವಿದ್ಯಾರ್ಥಿ ವೇತನಕ್ಕಿಂತ (₹2.81 ಕೋಟಿ) ದುಪ್ಪಟ್ಟು’ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್‌. ದೊರೆಸ್ವಾಮಿ ಹೇಳಿದರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊರ
ವರ್ತುಲ ರಸ್ತೆಯಲ್ಲಿರುವ ವಿಶ್ವವಿದ್ಯಾಲಯ ಕ್ಯಾಂಪಸ್‌ನ ಸಭಾಂಗಣದಲ್ಲಿ ಇದೇ 29ರಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿ
ಕೊಳ್ಳಲಾಗಿದೆ. ಸಿಸ್ಕೊ ಕಂಪನಿಯ ಭಾರತೀಯ ಘಟಕದ ಅಧ್ಯಕ್ಷ ಸಮೀರ್ ಗಾರಡೆ ಹಾಗೂ ಆಕ್ಸೆಂಚರ್ ಕಂಪನಿಯ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಮೋಹನ್ ಶೇಖರ್‌ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಪ್ರೊ. ಸಿಎನ್‌ಆರ್ ರಾವ್’ ಹಾಗೂ ‘ಪ್ರೊ. ಎಂಆರ್‌ಡಿ’ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಅತ್ಯುನ್ನತ ಶ್ರೇಣಿ ಪುರಸ್ಕಾರದಡಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 2014ರಿಂದ 2020
ರವರೆಗೆ ಒಟ್ಟು ₹27.58 ಕೋಟಿಯಷ್ಟು ವಿದ್ಯಾರ್ಥಿ ವೇತನ ನೀಡಿದ ಹೆಮ್ಮೆ ನಮ್ಮದು’ ಎಂದು ಹೇಳಿದರು.

‘ಆತ್ಮತೃಷ – ಸಾಂಸ್ಕೃತಿಕ ಟೆಕ್ನೊ’ ಹಬ್ಬ: ‘ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆ ಪ್ರೋತ್ಸಾಹಿಸಲು ಮಾರ್ಚ್ 5ರಿಂದ 7ರವರೆಗೆ ‘ಆತ್ಮತೃಷ – ಸಾಂಸ್ಕೃತಿಕ ಟೆಕ್ನೊ’ ಹಬ್ಬ ಆಯೋಜಿಸಲಾಗಿದೆ. ದೇಶದ 80 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ’ ಎಂದು ದೊರೆಸ್ವಾಮಿ ತಿಳಿಸಿದರು.

‘ಹಬ್ಬದ ನಿಮಿತ್ತ ಫೆ. 28ರಿಂದ ಆಕಾಶ್ ಗುಪ್ತ ಅವರಿಂದ ಕಾಮಿಡಿ ಶೋ, ಪ್ರೊ. ಚಿದಂಬರ್ ಕಾಳಮಂಜಿ ಅವರಿಂದ ಸಂಗೀತ ದರ್ಪಣ ಸೇರಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾ.5ರಂದು ಸಂಜೆ 5ಕ್ಕೆ ಹಬ್ಬ
ವನ್ನು ಉದ್ಘಾಟಿಸಲಿರುವ ಯಕ್ಷ
ಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ‘ವಾಲಿ ಮೋಕ್ಷ’
ಯಕ್ಷಗಾನ ಪ್ರದರ್ಶನವನ್ನೂ ನೀಡಲಿದ್ದಾರೆ. ಮಾ. 6ರಂದು ಸಾಂಸ್ಕೃತಿಕ ಸಂಜೆ ಹಾಗೂ 7ರಂದು ಗಾಯಕ ಬೆನ್ನಿದಯಾಳ್‌ ಹಾಗೂ ಕೇರಳದ ‘ತೈಕುಂಡಂಬ್ರಿಡ್ಜ್‌’ ವಾದ್ಯ ತಂಡದವರು ಕಾರ್ಯ
ಕ್ರಮ ನಡೆಸಿಕೊಡಲಿದ್ದಾರೆ’ ಎಂದರು.

1,381 ವಿದ್ಯಾರ್ಥಿಗಳಿಗೆ ಉದ್ಯೋಗ: ‘ವಿವಿಧ ವಿಭಾಗಗಳಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ 1,381 ವಿದ್ಯಾರ್ಥಿಗಳು 2020ರ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ವಾರ್ಷಿಕ ಗರಿಷ್ಠ ₹49.75 ಲಕ್ಷ ಹಾಗೂ ಕನಿಷ್ಠ ₹8.17 ಲಕ್ಷ ವೇತನಕ್ಕೆ ಅರ್ಹತೆ ಪಡೆದಿದ್ದಾರೆ. ಮೈಕ್ರೊಸಾಫ್ಟ್ ಸೇರಿ ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ 52 ವಿದ್ಯಾರ್ಥಿಗಳು 2 ತಿಂಗಳ ಇಂಟರ್ನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ’ ಎಂದು ದೊರೆಸ್ವಾಮಿ ಹೇಳಿದರು.

ಹುತಾತ್ಮರ ಕುಟುಂಬದವರಿಗೆ ‘ಸಮರ್ಪಣ’

‘ಹುತಾತ್ಮ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಅಂಥ ಸೈನಿಕರ ಕುಟುಂಬಗಳಿಗೆ ತಲಾ ₹30,000 ನೀಡಿ ಸನ್ಮಾನಿಸಲು ‘ಸಮರ್ಪಣ’ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಪಿಂಚಣಿ ಹಾಗೂ ಇತರೆ ಸೌಲಭ್ಯ ಒದಗಿಸಲು ಕಾನೂನು ನೆರವು ಸಹ ನೀಡಲಾಗುತ್ತಿದೆ’ ಎಂದು ದೊರೆಸ್ವಾಮಿ ತಿಳಿಸಿದರು.

‘ಮಾ. 22ರಂದು ‘ಸಮರ್ಪಣ ಮ್ಯಾರಥಾನ್’ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 500ಕ್ಕೂ ಹೆಚ್ಚು ಸೈನಿಕರು ಸೇರಿ ಸುಮಾರು 4,000 ಮಂದಿ ಭಾಗವಹಿಸಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT