ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಡಂಬಲ್ಸ್‌ನಿಂದ ಹೊಡೆದು ಪತ್ನಿ ಕೊಲೆ

Last Updated 3 ಫೆಬ್ರುವರಿ 2023, 5:40 IST
ಅಕ್ಷರ ಗಾತ್ರ

ಬೆಂಗಳೂರು: ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಲೀಡಿಯಾ (44) ಎಂಬುವವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಪತಿ ಮಾರಿಸ್ (46) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಹೊಯ್ಸಳ ಸ್ಟ್ರೀಟ್‌ನ 4ನೇ ಅಡ್ಡರಸ್ತೆಯ ನಿವಾಸಿ ಮಾರಿಸ್, 18 ವರ್ಷಗಳ ಹಿಂದೆ ಲೀಡಿಯಾ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ.

‘ಆರೋಪಿ ಮಾರಿಸ್, ಪತ್ನಿ ಲೀಡಿಯಾ ಜೊತೆ ಆಗಾಗ ಜಗಳ ತೆಗೆಯುತ್ತಿದ್ದ. ಸಣ್ಣಪುಟ್ಟ ವಿಷಯಕ್ಕೂ ಹಲ್ಲೆ ಮಾಡುತ್ತಿದ್ದ. ಗುರುವಾರ ಬೆಳಿಗ್ಗೆ ಮಕ್ಕಳು ಶಾಲೆಗೆ ಹೋಗಿದ್ದರು. ಇದೇ ವೇಳೆ ಮನೆಯಲ್ಲಿದ್ದ ದಂಪತಿ ನಡುವೆ ಜಗಳ ಶುರುವಾಗಿತ್ತು. ಸಿಟ್ಟಾದ ಮಾರಿಸ್, ಡಂಬಲ್ಸ್‌ನಿಂದ ಲೀಡಿಯಾ ತಲೆಗೆ ಹೊಡೆದಿದ್ದ’ ಎಂದು ಪೊಲೀಸರು ಹೇಳಿದರು.

‘ಡಂಬಲ್ಸ್‌ನಿಂದ ಒಂದು ಬಾರಿ ಹೊಡೆಯುತ್ತಿದ್ದಂತೆ ಲೀಡಿಯಾ ಕುಸಿದು ಬಿದ್ದಿದ್ದರು. ಇದಾದ ನಂತರವೂ ಆರೋಪಿ, ಲೀಡಿಯಾ ಸಾಯುವವರೆಗೂ ಹಲವು ಬಾರಿ ಡಂಬಲ್ಸ್‌ನಿಂದ ತಲೆಗೆ ಹೊಡೆದಿದ್ದ.’

‘ಕೊಲೆ ಬಗ್ಗೆ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣ ದಾಖಲಾದ ಕೆಲ ಗಂಟೆಗಳಲ್ಲೇ ಆರೋಪಿ ಮಾರಿಸ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT