‘ವನ್ಯಜೀವಿಗಳೂ ಸಹಿಷ್ಣುತೆ ಕಲಿಸುತ್ತವೆ’

7

‘ವನ್ಯಜೀವಿಗಳೂ ಸಹಿಷ್ಣುತೆ ಕಲಿಸುತ್ತವೆ’

Published:
Updated:
Deccan Herald

ಬೆಂಗಳೂರು: ‘ವನ್ಯಜೀವಿಗಳಿಂದ ಸಹಿಷ್ಣುತೆ, ಸಂಪನ್ಮೂಲ ಹಂಚಿಕೆ ಮತ್ತು ನೈಸರ್ಗಿಕ ಸ್ವಚ್ಛತೆಯ ಪಾಠಗಳನ್ನು ನಾವೆಲ್ಲ ಕಲಿಯಬೇಕಾಗಿದೆ’ ಎಂದು ವನ್ಯಜೀವಿ ಛಾಯಾಗ್ರಾಹಕ ದಿನೇಶ್‌ ಕುಂಬ್ಳೆ ಹೇಳಿದರು.

ಸಪ್ನ ಬುಕ್‌ ಹೌಸ್‌ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ವನ್ಯಜೀವಿಗಳಿಂದ ಕಲಿಯಬೇಕಾದ ಪಾಠಗಳು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ತಾವು ಕ್ಲಿಕ್ಕಿಸಿದ ಫೋಟೊಗಳ ಪ್ರಾತ್ಯಕ್ಷಿಕೆ ನೀಡಿದರು.  

‘ವನ್ಯಜೀವಿಗಳು ಹಸಿವಾಗದ ಹೊರತು ಬೇರಾವ ಕಾರಣಕ್ಕೂ ಅನ್ಯಜೀವಿಯ ಮೇಲೆ ದಾಳಿ ಮಾಡುವುದಿಲ್ಲ. ಹಗೆತನ ಸಾಧಿಸುವುದಿಲ್ಲ. ಅವುಗಳಲ್ಲಿನ ಸಹಿಷ್ಣುತೆ ಗುಣವನ್ನು ನಾವು ಮೈಗೂಡಿಸಿಕೊಳ್ಳಬೇಕಿದೆ’ ಎಂದರು.

‘ಕೆಲವು ಪಕ್ಷಿಗಳು ತಾವು ಕಟ್ಟಿದ ಗೂಡಿನಲ್ಲಿ ಮರಿಗಳು ಹಿಕ್ಕೆ ಹಾಕಲು ಬಿಡುವುದಿಲ್ಲ. ಗೂಡನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಲುವಾಗಿ ಮರಿಗಳು ಹಿಕ್ಕೆ ಹಾಕುತ್ತಲೇ ಅದನ್ನು ಬಾಯಲ್ಲಿ ಕಚ್ಚಿಕೊಂಡು ಬೇರೆಡೆ ಸಾಗಿಸುತ್ತವೆ. ಗೂಡಿನ ಬಳಿ ಹಿಕ್ಕೆಗಳು ಬಿದ್ದರೆ, ಬೇಟೆಗಾರ ಜೀವಿಗಳಿಗೆ ಸುಳಿವು ಸಿಗುತ್ತದೆ ಎಂಬ ಕಾರಣಕ್ಕೆ ಹಾಗೆ ಮಾಡುತ್ತವೆ’ ಎಂದು ತಿಳಿಸಿದರು.

ತಾವು ಕ್ಲಿಕ್ಕಿಸಿದ ಪಶ್ಚಿಮ ಘಟ್ಟದ ಪ್ರಾಣಿ–ಪಕ್ಷಿಗಳ ಚಿತ್ರಗಳು, ರಾಷ್ಟ್ರೀಯ ಉದ್ಯಾನಗಳಲ್ಲಿನ ಹುಲಿ, ಸಿಂಹ, ಚಿರತೆ, ಆನೆ, ಸಾಗರ ಜೀವಿಗಳ ಫೋಟೊಗಳನ್ನು ಸಭಿಕರಿಗೆ ತೋರಿಸಿದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !