ಬುಧವಾರ, ಜೂನ್ 3, 2020
27 °C
ಗರ್ಭಿಣಿ, ಹಾಲುಣಿಸುವ ತಾಯಂದಿರ ಚಿಕಿತ್ಸೆಗೆ ಸಂಚಾರ ವೈದ್ಯಕೀಯ ಘಟಕ

ಕಾರ್ಮಿಕರ ಆರೋಗ್ಯ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಸಲುವಾಗಿ ಬಿಬಿಎಂಪಿ ಸಂಚಾರ ವೈದ್ಯಕೀಯ ಘಟಕವನ್ನು ಆರಂಭಿಸಿದೆ. ಈ ಘಟಕದ ತಜ್ಞ ವೈದ್ಯರು ಮಂಗಳವಾರ 154 ಮಂದಿಯ ಆರೋಗ್ಯ ತಪಾಸಣೆ ನಡೆಸಿದರು.

ಈ ಸಂಚಾರ ವೈದ್ಯಕೀಯ ಘಟಕವು ಗರ್ಭಿಣಿಯರು, ಶಿಶುಗಳಿಗೆ ಹಾಲುಣಿಸುವ ತಾಯಂದಿರು ಹಾಗೂ ಮಕ್ಕಳ ಆರೋಗ್ಯದ ಮೇಲೆ ವಿಶೇಷ ನಿಗಾ ಇಡಲಿದೆ. ಈ ಸಲುವಾಗಿ ಪ್ರಸೂತಿ ತಜ್ಞರು ಹಾಗೂ ಮಕ್ಕಳ ತಜ್ಞರನ್ನು ಈ ವೈದ್ಯಕೀಯ ತಂಡದಲ್ಲಿ ಸೇರ್ಪಡೆಗೊಳಿಸಲಾಗಿದೆ. ನಾಲ್ವರು ಗರ್ಭಿಣಿಯರು ಹಾಗೂ ಐವರು ಮಕ್ಕಳ ಆರೋಗ್ಯವನ್ನು ತಂಡವು ಮಂಗಳವಾರ ತಪಾಸಣೆಗೆ ಒಳಪಡಿಸಿತು.

ಗರ್ಭಿಣಿಯರ ಪ್ರಸವಪೂರ್ವ ಆರೋಗ್ಯ ತಪಾಸಣೆ, ಹೆರಿಗೆ ವೇಳೆ ಅಪಾಯ ಉಂಟಾಗುವ ಸಾಧ್ಯತೆ ಇದ್ದರೆ ಅವರನ್ನು ಆಸ್ಪತ್ರೆಗೆ ದಾಖಲಿಸುವುದು, ಪ್ರತಿರೋಧಕ ಲಸಿಕೆ ನೀಡುವುದು, ರಕ್ತದಕೊರತೆ ಇರುವವರಿಗೆ ಕಬ್ಬಿಣ ಮತ್ತು ಫೋಲಿಕ್‌ ಆಮ್ಲಯುಕ್ತ ಗುಳಿಗೆ ನೀಡುವುದು, ವಿಟಮಿನ್‌ ಕೊರತೆ, ಪೌಷ್ಠಿಕಾಂಶ ಕೊರತೆ ಇರುವವರ ಚಿಕಿತ್ಸೆ ಕೊಡಿಸುವ ಕಾರ್ಯಗಳನ್ನು ಈ ವೈದ್ಯಕೀಯ ತಂಡ ನಿರ್ವಹಿಸಲಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರನ್ನು ಆಸ್ಪತ್ರೆಗೆ ದಾಖಲಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.