ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಥಿಮಜ್ಜೆ ಕಸಿಗೆ ಬಳಕೆಯಾದ ಪೋಷಕರ ಮಜ್ಜೆ

Last Updated 3 ನವೆಂಬರ್ 2013, 19:52 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ  ನಾಲ್ಕು ವರ್ಷದ ಮಗು ವಿಗೆ ತಂದೆಯ ಅಸ್ಥಿಮಜ್ಜೆಯನ್ನು ಕಸಿ ಮಾಡುವ ಮೂಲಕ ನಗರದ  ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಜೂಂದಾರ್ ಷಾ ಕ್ಯಾನ್ಸರ್ ಕೇಂದ್ರವು ಯಶಸ್ವಿ ಕಸಿ ಚಿಕಿತ್ಸೆ ನೀಡಿದೆ. 

ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುನೀಲ್ ಭಟ್, ‘ನಾಲ್ಕು ವರ್ಷದ  ಭುವನಾಳಿಗೆ ರಕ್ತ ಕ್ಯಾನ್ಸರ್
(ಲ್ಯೂಕೆಮಿಯಾ)ಕಾಣಿಸಿಕೊಂಡಿತ್ತು.  ಒಬ್ಬಳೇ ಮಗಳಾಗಿದ್ದರಿಂದ ತಂದೆಯ ಅಸ್ಥಿಮಜ್ಜೆಯ ಮೂಲಕವೇ ಚಿಕಿತ್ಸೆ ಮುಂದುವರೆಸಲಾಯಿತು’ ಎಂದು ಮಾಹಿತಿ ನೀಡಿದರು.

‘ಕ್ಯಾನ್ಸರ್ ರೋಗಿಗಳ ಅಸ್ಥಿ ಮಜ್ಜೆಗೆ ಹೋಲಿಕೆಯಾಗುವಂತಹ ಮಜ್ಜೆ ದೊರೆಯುವುದು ಬಹಳ ಕಷ್ಟ. ಅರ್ಧ ದಷ್ಟು  ಹೋಲಿಕೆ ಇರುವ ಒಡ ಹುಟ್ಟಿ ದವರ ಹಾಗೂ ಪೋಷಕರ ಅಸ್ತಿ ಮಜ್ಜೆ ಯಿಂದಲೂ ಕಸಿ ಸಾಧ್ಯವೆಂಬ ವಿಚಾರ ಕುರಿತು ಜಾಗೃತಿ ಮೂಡಬೇಕಿದೆ’ ಎಂದು ತಿಳಿಸಿದರು.

‘ರಕ್ತ ಕ್ಯಾನ್ಸರ್ ಇದ್ದರೆ ಬಿಳಿ ರಕ್ತ ಕಣಗಳು ಸರಿಯಾಗಿ ಬೆಳೆಯಲು ಸಾಧ್ಯ ವಾಗುವುದಿಲ್ಲ. ಬಿಳಿ ರಕ್ತ ಕಣಗಳು ಮೂಳೆಯ ಮಜ್ಜೆಯ  ಭಾಗದಲ್ಲಿ ಉತ್ಪಾದನೆಯಾಗುತ್ತದೆ. ಈ ಮಜ್ಜೆ ಯನ್ನು ಕಸಿ ಮಾಡುವುದರಿಂದ ಬಿಳಿ ರಕ್ತ ಕಣಗಳ ಪುನಶ್ಚೇತನ ಮಾಡಲು ಸಾಧ್ಯವಿದೆ. ಇದರಿಂದ ದೇಹದ ಪ್ರತಿ ರೋಧ ಶಕ್ತಿಯನ್ನು ಹೆಚ್ಚಿಸಲು ಸಹ ಕಾರಿಯಾಗುತ್ತದೆ’ ಎಂದು ಮಾಹಿತಿ ನೀಡಿದರು.

ಭುವನ  ತಂದೆ ಎಸ್.ದಿಲೀಪ್ ಕುಮಾರ್, ‘ಎರಡು ವರ್ಷಗಳಿಂದೀ ಚೆಗೆ ಮಗುವಿಗೆ ಪದೇ ಪದೇ ಜ್ವರ ಕಾಣಿಸಿಕೊಳ್ಳಲು ಆರಂಭವಾಯಿತು. ರಕ್ತಪರೀಕ್ಷೆ ಮಾಡಿಸಿದಾಗ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಕಿದ್ವಾಯಿ ಸೇರಿದಂತೆ ಇತರೆ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು ಗುಣ ಮುಖವಾಗಿರಲಿಲ್ಲ’ ಎಂದು ಅವರು ತಿಳಿಸಿದರು.

‘ಅಸ್ಥಿ ಮಜ್ಜೆಯ ಕಸಿ ಮಾಡುವ ಬಗ್ಗೆ ತಿಳಿದಿದ್ದೆ. ದಾನಿಗಳಿಂದ ಮಜ್ಜೆ ಪಡೆಯುವುದು ಬಹಳ ದುಬಾರಿ ಯಾಗಿವುದರಿಂದ, ಬೇರೆ ಮಾರ್ಗ ವಿಲ್ಲದೇ ನಾನೇ ಮಜ್ಜೆಯನ್ನು ದಾನ ಮಾಡಲು ಮುಂದಾದೆ. ಮಗು ಈಗ ಸಂಪೂರ್ಣ ಗುಣಮುಖವಾಗಿದೆ.  ಈವರೆಗೆ ₨ 12 ಲಕ್ಷ ಖರ್ಚಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT