ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನಗರದ ನಡುವಣ ರಾಷ್ಟ್ರೀಯ ಹೆದ್ದಾರಿ –7ರಲ್ಲಿ ಪ್ರಯಾಣಿಸುವ ವಾಹನ ಸವಾರರು ಇನ್ನು ಮುಂದೆ ಅಧಿಕ ರಸ್ತೆ ಶುಲ್ಕ (ಟೋಲ್) ಪಾವತಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಏಪ್ರಿಲ್ 1ರಿಂದ ಅನ್ವಯವಾಗುವಂತೆ ರಸ್ತೆ ಶುಲ್ಕವನ್ನು ಪರಿಷ್ಕರಿಸಿದೆ.
ರಸ್ತೆಯಲ್ಲಿ ಹೋಗಿ ಬರುವ ಕಾರು ಗಳು, ಜೀಪುಗಳು, ವ್ಯಾನ್ಗಳು ರೂ120 ಪಾವತಿಸಬೇಕಿದೆ. ಈ ಹಿಂದೆ ದರ ರೂ115 ಇತ್ತು. ತಿಂಗಳ ಪಾಸ್ ಮೊತ್ತ ರೂ2,560ರಿಂದ ರೂ2,650ಕ್ಕೆ ಏರಿಕೆ ಯಾಗಿದೆ. ಅದೇ ರೀತಿ, ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನ ಗಳು, ಮಿನಿ ಬಸ್ಗಳು ಹೋಗಿ ಬರಲು ರೂ180 ನೀಡಬೇಕಿದೆ. ಮಾಸಿಕ ಪಾಸ್ ದರ ರೂ4,020 ಆಗಿದೆ.