ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಲಕ್ಷ ಹೊಸ ಬ್ಯಾಂಕ್‌ ಖಾತೆ

ಪ್ರಧಾನಮಂತ್ರಿ ‘ಜನಧನ ಯೋಜನೆ’: ಬೆಂಗಳೂರು ನಗರ ಜಿಲ್ಲೆ
Last Updated 28 ಆಗಸ್ಟ್ 2014, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಧಾನಮಂತ್ರಿ ಜನ-ಧನ ಯೋಜನೆ’ಯಡಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದು ಲಕ್ಷ ಹೊಸ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ.
ನಗರ ಜಿಲ್ಲಾ ಪಂಚಾಯ್ತಿ, ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಕೆನರಾ ಬ್ಯಾಂಕ್‌ ಆಶ್ರಯದಲ್ಲಿ ನಗರದ ಶಿಕ್ಷಕರ ಸದನ­ದಲ್ಲಿ ಗುರುವಾರ ನಡೆದ ‘ಪ್ರಧಾನ­ಮಂತ್ರಿ ಜನ ಧನ ಯೋಜನೆ’ಯ ಉದ್ಘಾಟನಾ ಸಮಾರಂಭದಲ್ಲಿ ಕೆನರಾ ಬ್ಯಾಂಕ್‌ ಡಿಜಿಎಂ ರವೀಂದ್ರ ಭಂಡಾರಿ ಈ ವಿಷಯ ತಿಳಿಸಿದರು.

‘ನಗರ ಜಿಲ್ಲೆಯಲ್ಲಿ 660 ಹಳ್ಳಿಗಳು ಇವೆ. ಜಿಲ್ಲೆಯ ಜನಸಂಖ್ಯೆ 96 ಲಕ್ಷ. 48 ಬ್ಯಾಂಕ್‌ಗಳ ಒಟ್ಟು 2007 ಶಾಖೆಗಳು ಇವೆ. 23.93 ಲಕ್ಷ ಕುಟುಂಬಗಳ ಪೈಕಿ 16 ಲಕ್ಷ ಕುಟುಂಬಗಳು ಬ್ಯಾಂಕ್‌ ಖಾತೆ ಹೊಂದಿವೆ. ಆಗಸ್ಟ್‌ 16ರಂದು ನಗರ ಜಿಲ್ಲೆಯಲ್ಲಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಒಂದು ಲಕ್ಷ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ. ಈ ಅಭಿಯಾನ 2015ರ ಆಗಸ್ಟ್ ತಿಂಗಳ ವರೆಗೆ ಮುಂದುವರಿಯಲಿದೆ’ ಎಂದು ಅವರು ವಿವರಿಸಿದರು.

ಹೆಬ್ಬಾಳ ಶಾಸಕ ಜಗದೀಶ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿ­ದರು. ಜಿಲ್ಲಾಧಿಕಾರಿ ವಿ.ಶಂಕರ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವ­ಹಣಾ­ಧಿಕಾರಿ ಬೆಟ್ಟಸ್ವಾಮಿ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವಿಭಾಗೀಯ ವ್ಯವಸ್ಥಾಪಕ ಗುರುದತ್‌ ಕೆ.ಎಸ್‌. ಮತ್ತಿತರರು ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT