ಬೆಂಗಳೂರು: ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಸರಿಪಡಿಸಲು ಏಪ್ರಿಲ್ 16ರಿಂದ ಏ.30ರವರೆಗೆ ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ಮತದಾರರ ವಿಶೇಷ ನೋಂದಣಿ ಮತ್ತು ಪಟ್ಟಿ ಪರಿಷ್ಕರಣೆ ಅಭಿಯಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಪ್ರಕಟಿಸಿದರು.

ಕೇಂದ್ರ ಚುನಾವಣಾ ಆಯೋಗ ಮತ್ತು ಜನಾಗ್ರಹ ಸರ್ಕಾರೇತರ ಸಂಸ್ಥೆಯು ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ `ನಗರ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ಸಮರ್ಪಕ ನಿರ್ವಹಣೆ~ ಕಾರ್ಯಾಗಾರದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಬೆಂಗಳೂರು ನಗರದಲ್ಲಿ ಮತದಾರರ ನೋಂದಣಿ ಪ್ರಮಾಣ ತೀರಾ ಕಡಿಮೆ ಇದೆ.

ಈ ಹಿನ್ನೆಲೆಯಲ್ಲಿ ಎರಡು ವಾರಗಳ ಅವಧಿಯ ವಿಶೇಷ ಅಭಿಯಾನ ನಡೆಸಲಾಗುವುದು~ ಎಂದು ತಿಳಿಸಿದರು.
ಸದ್ಯ ಬೆಂಗಳೂರು ನಗರವನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಮತದಾರರ ನೋಂದಣಿ ಪ್ರಮಾಣ ಶೇಕಡ 94ರಷ್ಟಿದೆ. ಆದರೆ ಬೆಂಗಳೂರಿನಲ್ಲಿ ಈ ಪ್ರಮಾಣ ಶೇ 79ರಷ್ಟು ಮಾತ್ರ ಇದೆ.

ಜನಾಗ್ರಹ ಸಂಸ್ಥೆಯ ಸಹಯೋಗದಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕ ಅಭಿಯಾನ ನಡೆಸಲಾಗಿತ್ತು. ಮತದಾರರ ನೋಂದಣಿ ಪ್ರಮಾಣ ಕಡಿಮೆ ಇರುವುದಕ್ಕೆ ಅಭಿಯಾನದಲ್ಲಿ ಉತ್ತರ ಕಂಡುಕೊಳ್ಳಲಾಗಿದೆ. ಪ್ರಾಯೋಗಿಕ ಅಭಿಯಾನದ ಫಲಿತಾಂಶವನ್ನು ಆಧರಿಸಿ ವಿಶೇಷ ಅಭಿಯಾನ ರೂಪಿಸಲಾಗಿದೆ ಎಂದರು.

ಈಗ ಇರುವ ಮತದಾರರ ಪಟ್ಟಿಯನ್ನು ಕರಡು ಪಟ್ಟಿ ಎಂಬುದಾಗಿ ಏ. 16ರಂದು ಪ್ರಕಟಿಸಲಾಗುವುದು. ನಂತರ ಏ. 30ರವರೆಗೂ ಚುನಾವಣಾ ಆಯೋಗದ ನೋಂದಣಿ ಅಧಿಕಾರಿಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಮನೆ, ಮನೆಗೂ ತೆರಳಿ ನೋಂದಣಿ ಹಾಗೂ ಪರಿಶೀಲನೆ ನಡೆಸುವರು.

ಏ.30ರ ನಂತರ ಮೂರು ವಾರಗಳವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಮೇ 23ಕ್ಕೂ ಮುನ್ನ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುವುದು. ಜೂನ್ 15ರ ವೇಳೆಗೆ ಪರಿಷ್ಕೃತ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಸಂಪತ್ ವಿವರಿಸಿದರು.

ಗುರುತಿನ ಸಮಸ್ಯೆಗೆ ಪರಿಹಾರ: ಪ್ರತಿ ಚುನಾವಣೆಯಲ್ಲೂ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಮತಗಟ್ಟೆಗಳಲ್ಲಿ ಗದ್ದಲ, ಗೊಂದಲ ಉಂಟಾಗುತ್ತದೆ. ಭಾವಚಿತ್ರಸಹಿತ ಮತದಾರರ ಗುರುತು ಚೀಟಿಯ ವಿತರಣೆ ಮತ್ತು ಮತದಾರರ ಪಟ್ಟಿಯ ಸಮರ್ಪಕ ಪರಿಷ್ಕರಣೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ವೈಯಕ್ತಿಕ ಸಮಸ್ಯೆಗಳ ಕಾರಣಗಳಿಂದ ನೋಂದಣಿ ಪ್ರಕ್ರಿಯೆಯಿಂದ ದೂರ ಉಳಿದವರನ್ನೂ ತಲುಪುವುದರಿಂದ ಮಾತ್ರ ಇದಕ್ಕೆ ಪರಿಹಾರವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಳೆದ ಬಾರಿ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿ ಪರಿಷ್ಕರಣೆಗೆ ಯುವ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಮಾಚಲ ಪ್ರದೇಶದಲ್ಲಿ ಶೇ 95ರಷ್ಟು ಯುವ ಮತದಾರರ ನೋಂದಣಿ ಆಗಿದೆ. ಕರ್ನಾಟಕದಲ್ಲಿ ಈ ಪ್ರಮಾಣ ಶೇ 85ರಷ್ಟಿತ್ತು. ಮುಂದಿನ ದಿನಗಳಲ್ಲೂ ಇದೇ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ ಎಂದರು.

ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್.ಕೃಷ್ಣಮೂರ್ತಿ ಮಾತನಾಡಿ, ದೇಶದಲ್ಲಿ ಮತದಾರರ ನೋಂದಣಿ ಹೊಣೆಗಾರಿಕೆಯನ್ನು ಚುನಾವಣಾ ಆಯೋಗ ಹೊಂದಿದೆ. ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಂಡಿರುವುದು ಆಯೋಗದ ಒಂದು ಐತಿಹಾಸಿಕ ಹೆಜ್ಜೆ. ದೇಶದ ಎಲ್ಲ ಮಹಾನಗರಗಳ ಮತದಾರರ ನೋಂದಣಿಯಲ್ಲೂ ಈ ಮಾದರಿಯನ್ನು ಅನುಸರಿಸಬೇಕು ಎಂದು ಸಲಹೆ ಮಾಡಿದರು.

`ಪ್ರಜಾಪ್ರಭುತ್ವದ ಶಕ್ತಿ ಇರುವುದು ಮತದಾರರಲ್ಲಿ. ಸಕಾಲಕ್ಕೆ ಮತದಾರರ ಪಟ್ಟಿಯ ಪರಿಷ್ಕರಣೆಯಿಂದ ಮತದಾರರಿಗೆ ಶಕ್ತಿ ತುಂಬಲು ಸಾಧ್ಯ. ಚುನಾವಣಾ ಆಯೋಗ ಈಗ ಕೈಗೆತ್ತಿಕೊಂಡಿರುವ ಮಾರ್ಗದ ಮೂಲಕ ಶುದ್ಧ ಮತದಾರರ ಪಟ್ಟಿ ಸಿದ್ಧಪಡಿಸುವುದು ಸಾಧ್ಯವಾಗಲಿದೆ~ ಎಂದು ಇನ್ಫೋಸಿಸ್ನ ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ನಾರಾಯಣಮೂರ್ತಿ ಹೇಳಿದರು.ಜನಾಗ್ರಹ ಸಂಸ್ಥೆಯ ರಮೇಶ್ ರಾಮನಾಥನ್, ಸ್ವಾತಿ ರಾಮನಾಥನ್ ಮತ್ತಿತರರು ಉಪಸ್ಥಿತರಿದ್ದರು.

ವಿಶೇಷ ಸಿದ್ಧತೆ

ಮತದಾರರ ನೋಂದಣಿಯಲ್ಲಿನ ಹಿನ್ನಡೆಗೆ ಕಾರಣವಾಗುವ ಅಂಶಗಳ ಬಗ್ಗೆ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪ್ರಾಯೋಗಿಕ ಅಭಿಯಾನದಲ್ಲಿ ಮನದಟ್ಟಾಗಿದೆ. ಅವುಗಳನ್ನು ಆಧರಿಸಿ ವಿಶೇಷ ಅಭಿಯಾನದ ಸಿದ್ಧತೆ ನಡೆದಿದೆ. ಮತದಾರರ ಪಟ್ಟಿಯಲ್ಲಿನ ಲೋಪ ಸರಿಪಡಿಸಲು ಆಯೋಗ ಸಜ್ಜಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಿ.ಎಸ್.ಸುರಂಜನ ತಿಳಿಸಿದರು.

`ಮತದಾರರ ನೋಂದಣಿಯಲ್ಲಿ ಶೇಕಡ 100ರಷ್ಟು ಪ್ರಗತಿ ಸಾಧ್ಯ ಆಗದಿರಬಹುದು. ಶೇ 80ರಿಂದ ಶೇ 90ರಷ್ಟು ಪ್ರಗತಿಯಾದರೂ ದೊಡ್ಡ ಯಶಸ್ಸು. ಬೆಂಗಳೂರಿನಲ್ಲಿ ನಡೆಯುವ ವಿಶೇಷ ಅಭಿಯಾನದಲ್ಲಿ ಭಾನುವಾರವೂ ನೋಂದಣಿ ನಡೆಯಲಿದೆ. ಅರ್ಜಿ ಸ್ವೀಕರಿಸಲು ಸಂಚಾರಿ ಘಟಕಗಳನ್ನೂ ನಿಯೋಜಿಸಲಾಗುವುದು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.