ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾರೀಶಕ್ತಿ ಪುರಸ್ಕಾರ’ಕ್ಕೆ ಅರ್ಜಿ ಆಹ್ವಾನ

Last Updated 20 ಜುಲೈ 2017, 19:50 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಕೇಂದ್ರ ಸರ್ಕಾರ ನೀಡುವ ‘ನಾರೀಶಕ್ತಿ ಪುರಸ್ಕಾರ’ಗಳಿಗೆ  ಅರ್ಜಿ ಆಹ್ವಾನಿಸಲಾಗಿದೆ.

ಬೇಟಿ ಬಚಾವೋ, ಬೇಟಿ ಪಡಾವೋ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ‘ರಾಣಿ ರುದ್ರಮ್ಮ ದೇವಿ ಪ್ರಶಸ್ತಿ’ಗೆ, ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಕೆಲಸ ಮಾಡಿದವರು ‘ಮಾತಾ ಜೀಜಾಬಾಯಿ ಪ್ರಶಸ್ತಿ’ಗೆ,  ಮಕ್ಕಳು ಮತ್ತ ಮಹಿಳೆಯರ ಮಾನಸಿಕ ಆರೋಗ್ಯ ಸುಧಾರಣೆಗಾಗಿ ಕೆಲಸ ಮಾಡಿದವರು ‘ಮಾತಾ ಕನ್ನಗೀ ದೇವಿ ಪ್ರಶಸ್ತಿ’ಗೆ, ಮಹಿಳೆಯರಿಗೆ  ಉದ್ಯೋಗಾವಕಾಶ ಒದಗಿಸಿದವರು ‘ದೇವಿ ಅಹಲ್ಯಬಾಯಿ ಹೋಳ್ಕರ್‌ ಪ್ರಶಸ್ತಿ’ಗೆ, ಸಬಲೀಕರಣಕ್ಕೆ ಕೆಲಸ ಮಾಡಿದವರು  ‘ರಾಣಿ ಗಾಯದಿನಲ್ಲಿ ಜಿಲ್ಲಿಂಗ್ ಪ್ರಶಸ್ತಿ’ಗೆ ಅರ್ಜಿ ಸಲ್ಲಿಸಬಹುದು. ಆ.15ರೊಳಗೆ ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಬೇಕು.  ದೂರವಾಣಿ 080–26578688

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT