ಬೆಂಗಳೂರು: `ಐದನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಡಿ. 20 ರಿಂದ ಆರಂಭವಾಗಲಿದೆ~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಹೇಳಿದರು.

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕುರಿತು ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಉದ್ಘಾಟನಾ ಸಮಾರಂಭವು ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ. ಉದ್ಘಾಟನೆಯಂದು ನೆದರ್ಲೆಂಡ್ನ ಬೌದೆವಿನ್ ಕೂಲ್ ನಿರ್ದೇಶನದ `ಕೌಬಾಯ್~ ಚಲನಚಿತ್ರವು ಪ್ರದರ್ಶನಗೊಳ್ಳಲಿದೆ. ಚಿತ್ರೋತ್ಸವದಲ್ಲಿ 50 ಕ್ಕೂ ಹೆಚ್ಚು ದೇಶಗಳ 160 ಚಿತ್ರಗಳು ಪ್ರದರ್ಶನಗೊಳ್ಳಲಿವೆ~ ಎಂದು ತಿಳಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಮಾತನಾಡಿ, `ಭಾರತೀಯ ಸಿನೆಮಾ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆಯು ಡಿ.21 ರಂದು ವಾರ್ತಾ ಇಲಾಖೆಯ ಸುಲೋಚನಾ ಸಭಾಂಗಣದಲ್ಲಿ ನಡೆಯಲಿದೆ. ಹಳೆಯ ಚಿತ್ರೀಕರಣದ ಉಪಕರಣಗಳು, ಅಂಚೆಚೀಟಿಗಳು ಹಾಗೂ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ~ ಎಂದರು.

`ಕನ್ನಡ ಚಲನಚಿತ್ರಗಳ ಸ್ಪರ್ಧೆಗೆ ಪ್ರವೇಶ ಪತ್ರವನ್ನು ಸ್ವೀಕರಿಸಲು ನ.30 ರವರೆಗೆ ಅವಕಾಶವಿದೆ. ಜತೆಗೆ ಕೊಂಕಣಿ, ಕೊಡವ, ತುಳು ಭಾಷೆಯ ಚಿತ್ರಗಳನ್ನು ಪ್ರದರ್ಶಿಸುವ ಬಗ್ಗೆಯೂ ನಿರ್ಧರಿಸಲಾಗುವುದು~ ಎಂದು ತಿಳಿಸಿದರು.

ಪ್ರತಿನಿಧಿಗಳ ನೋಂದಣಿ: ಪ್ರತಿನಿಧಿಗಳ ನೋಂದಣಿ ಕಾರ್ಯವು ನಾಲ್ಕು ಕೇಂದ್ರಗಳಲ್ಲಿ ನಡೆಯಲಿದೆ. ಭಗವಾನ್ ಮಹಾವೀರ ರಸ್ತೆಯ ವಾರ್ತಾ ಸೌಧ. ಎನ್.ಆರ್. ಚೌಕದ ಬಾದಾಮಿ ಹೌಸ್, ಬನಶಂಕರಿ 2 ನೇ ಹಂತದ ಸುಚಿತ್ರಾ ಫಿಲಂ ಸೊಸೈಟಿ, ಶೇಷಾದ್ರಿಪುರದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪ್ರತಿನಿಧಿಗಳ ನೋಂದಣಿ ಕಾರ್ಯವು ಡಿ. 1 ರಂದು ನಡೆಯಲಿದೆ.

ಮಾಹಿತಿಗೆ ಸಂಪರ್ಕಿಸಿ: ಚಲನಚಿತ್ರೋತ್ಸವದ ವೆಬ್ಸೈಟ್: www.biffes.com ಅಥವಾ ದೂರವಾಣಿ ಸಂಖ್ಯೆ-2213 3410 /2213 3441.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.