ಬೆಂಗಳೂರು: ವೆಸ್ಟ್‌ಲ್ಯಾಂಡ್ ಪ್ರಕಾಶನ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಮುಕುಂದ ರಾವ್ ಅವರ ‘ಸ್ಕೈ–ಕ್ಲಾಡ್– ದ ಎಕ್ಟ್ರಾರ್ಡಿನರಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ಅಕ್ಕಮಹಾದೇವಿ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಈ ಕೃತಿಯು ಅಕ್ಕಮಹಾದೇವಿಯ ಜೀವನ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಇದರ ಬೆಲೆ ₹299.

ಅಕ್ಕ ಕವಯತ್ರಿ, ಸ್ತ್ರೀವಾದಿ ಮಾತ್ರವಲ್ಲ ಆಧ್ಯಾತ್ಮಿಕ ಹುಡುಕಾಟದಿಂದಲೂ ಗಮನ ಸಳೆಯುತ್ತಾಳೆ. ಆಕೆಯ ಕುರಿತು ಕನ್ನಡದಲ್ಲಿ ಅನೇಕ ಕೃತಿಗಳು ರಚನೆಯಾಗಿದ್ದರೂ ಇಂಗ್ಲಿಷ್ ಭಾಷೆಯಲ್ಲಿ ಅದರ ಕೊರತೆ ಇತ್ತು. ಅಕ್ಕನ ಜೀವನ ಚರಿತ್ರೆಯನ್ನು ಹೊಸ ರೀತಿಯಲ್ಲಿ ಕಟ್ಟಿಕೊಡುವಂತಹ ಪ್ರಯತ್ನವನ್ನು ಮುಕುಂದ ರಾವ್ ಮಾಡಿದ್ದಾರೆ.

‘ಈ ಕೃತಿ ಸ್ವಲ್ಪಮಟ್ಟಿಗೆ ಕಾದಂಬರಿಯೂ ಜೀವನಚರಿತ್ರೆಯೂ ಆಗಿದೆ’ ಎಂದು ನಿವೃತ್ತ ಪ್ರಾಧ್ಯಾಪಕಿ ವನಮಾಲಾ ವಿಶ್ವನಾಥ್ ತಿಳಿಸಿದರು.

ಬೆಂಗಳೂರು ವಿ.ವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕಿ ಡಾ.ಕೆ.ಎಸ್.ವೈಶಾಲಿ, ‘ಶೂನ್ಯ ಸಂಪಾದನೆ, ಶಾಮರಸನ ಪ್ರಭುಲಿಂಗಲೀಲೆ, ಹರಿಹರನ ಮಹಾದೇವಿಯಕ್ಕನ ರಗಳೆಯಲ್ಲಿ ವಚನಕಾರರ ಬಗ್ಗೆ ವೈಭವೀಕರಿಸಿರುವುದು ಕಾಣುತ್ತೇವೆ. ಅಕ್ಕನ ಬಗ್ಗೆ ವಾಸ್ತವಿಕ ದೃಷ್ಟಿಕೋನ ನೀಡುವ ಕೃತಿಗಳು ಅಲಭ್ಯ. 60 ಶಿವಶರಣೆಯರು ಇದ್ದರೂ ಅಕ್ಕ ನಮಗೆ ಮುಖ್ಯವಾಗುತ್ತಾಳೆ, ಕಾಡುತ್ತಾಳೆ. ಆಕೆಯ ಬಗ್ಗೆ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಾರಸ್ಯಕರ ಒಳನೋಟಗಳನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.