ಯಲಹಂಕ: ಇದೇ 26ರಂದು ನಡೆಯಲಿರುವ ಮೊದಲ ಹಂತದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಉತ್ತರ ತಾಲ್ಲೂಕು ಪಂಚಾಯಿತಿಯಲ್ಲಿ ಗುರುವಾರ ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಿತು. 3 ನಾಮಪತ್ರಗಳು ತಿರಸ್ಕೃತಗೊಂಡವು.

ಒಟ್ಟು 22 ತಾಲ್ಲೂಕು ಪಂಚಾಯಿತಿಗಳಿಗೆ ಸಲ್ಲಿಸಲಾಗಿದ್ದ 95 ನಾಮಪತ್ರಗಳ ಪೈಕಿ 2 ನಾಮಪತ್ರಗಳು ತಿರಸ್ಕೃತಗೊಂಡು, 93 ನಾಮಪತ್ರಗಳು ಪುರಸ್ಕೃತಗೊಂಡಿವೆ. ಉತ್ತರ ತಾಲ್ಲೂಕಿನ 11 ಜಿಲ್ಲಾ ಪಂಚಾಯಿತಿಗಳಿಗೆ ಸಲ್ಲಿಸಲಾಗಿದ್ದ 58 ನಾಮಪತ್ರಗಳ ಪೈಕಿ 1 ನಾಮಪತ್ರ ತಿರಸ್ಕೃತಗೊಂಡು 57 ನಾಮಪತ್ರಗಳು ಪುರಸ್ಕೃತಗೊಂಡಿವೆ.

ಬಂಡಿಕೊಡಿಗೇಹಳ್ಳಿ ತಾಲ್ಲೂಕು ಪಂಚಾಯಿತಿಗೆ ಜೆಡಿ(ಎಸ್) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ನಾಗರಾಜ್ ಅವರು, ಬದಲಿ ಅಭ್ಯರ್ಥಿಯೆಂದು ‘ಬಿ’ ಫಾರಂ ನೀಡಿದ್ದರಿಂದ ಮತ್ತು ಮಾದರಿ ಸಹಿ ಮತ್ತು ಮತಪತ್ರದಲ್ಲಿ ಅವರ ಹೆಸರು ಹೇಗಿರಬೇಕೆಂಬ ಬಗ್ಗೆ ಲಿಖಿತ ಹೇಳಿಕೆ ಸಲ್ಲಿಸದ ಹಿನ್ನೆಲೆಯಲ್ಲಿ ಹಾಗೂ ಹುಣಸಮಾರನಹಳ್ಳಿ ತಾಲ್ಲೂಕು ಪಂಚಾಯಿತಿಗೆ ಜೆಡಿ(ಎಸ್) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಜ ಅವರು ಜಾತಿ ಮತ್ತು ಘೋಷಣಾ ಪ್ರಮಾಣ ಪತ್ರ ನೀಡದೆ ಇರುವುದು ಹಾಗೂ ನಾಮಪತ್ರ ಸರಿಯಾದ ರೀತಿಯಲ್ಲಿ ಭರ್ತಿಮಾಡದ ಹಿನ್ನೆಲೆಯಲ್ಲಿ ಇವರಿಬ್ಬರ ನಾಮಪತ್ರಗಳು ತಿರಸ್ಕೃತಗೊಂಡವು.

ಹೆಸರಘಟ್ಟ ಜಿಲ್ಲಾ ಪಂಚಾಯಿತಿಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಲಕ್ಷ್ಮಣ್ ಅವರ ನಾಮಪತ್ರದಲ್ಲಿ ಕ್ರಮಸಂಖ್ಯೆ ಮತ್ತು ಭಾಗದ ಸಂಖ್ಯೆ ಹೊಂದಾಣಿಕೆಯಿಲ್ಲದ ಕಾರಣ ಅವರ ನಾಮಪತ್ರ ತಿರಸ್ಕೃತಗೊಂಡಿತು. ಶನಿವಾರ ನಾಮಪತ್ರ ಹಿಂದೆ ಪಡೆಯಲು ಕೊನೆಯ ದಿನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.