ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಜನ್ಯದ ವರ್ತನೆ: ಎನ್‌ಟಿಪಿಸಿ ಅಧಿಕಾರಿಗಳಿಗೆ ಸಲಹೆ

Last Updated 3 ಮೇ 2016, 19:47 IST
ಅಕ್ಷರ ಗಾತ್ರ

ಬಸವನಬಾಗೇವಾಡಿ (ವಿಜಯಪುರ ಜಿಲ್ಲೆ): ಕೂಡಗಿ ವಿದ್ಯುತ್‌ ಸ್ಥಾವರದ ಕೆರೆಗೆ ಈಜಲು ಬಂದಿದ್ದ ಎನ್ನಲಾದ ಯುವಕನೊಂದಿಗೆ ಅಮಾನವೀಯವಾಗಿ ನಡೆದುಕೊಂಡ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡ ಬಗ್ಗೆ ತಿಳಿಸಬೇಕು ಎಂದು ಉಪವಿಭಾಗಾಧಿಕಾರಿ ಪರಶುರಾಮ ಮಾದರ ಸ್ಥಾವರದ ಅಧಿಕಾರಿಗಳಿಗೆ ಸೂಚಿಸಿದರು.

ಎನ್‌ಟಿಪಿಸಿ ಸ್ಥಾವರಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ಸ್ಥಾವರದ ಕೆರೆ ಹಾಗೂ ಇತರ ಜಾಗಕ್ಕೆ ಅನಧಿಕೃತವಾಗಿ ಯಾರಾದರೂ ಪ್ರವೇಶಿಸಿದ್ದು ತಿಳಿದುಬಂದರೆ ಪೊಲೀಸರಿಗೆ ವಿಷಯ ತಿಳಿಸಬೇಕು. ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು. ಇತ್ತೀಚೆಗೆ ಕೆರೆಗೆ ಈಜಲು ಬಂದ ಯುವಕನೊಬ್ಬನ ಜೊತೆ ಭದ್ರತಾ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡ ವಿಡಿಯೊ ತುಣುಕುಗಳು ಮೊಬೈಲ್‌ನಲ್ಲಿ ಹರಿದಾಡುತ್ತಿದ್ದು, ಆ ಘಟನೆಯ ವಿವರ ನೀಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT