ಬೆಂಗಳೂರು: ಲೇಖಕ ಡಾ.ಕೆ.ಎಸ್.ನಾರಾಯಣಾಚಾರ್ಯ ಅವರು ರಚಿಸಿರುವ ‘ವಾಲ್ಮೀಕಿ ಯಾರು?’ ಕೃತಿಯನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿದ್ದರೂ ಮಾರಾಟ ಮಾಡುತ್ತಿದ್ದ ಗಾಂಧಿನಗರದ ಸಪ್ನ ಬುಕ್ ಹೌಸ್ ಮಳಿಗೆ ಮೇಲೆ ಉಪ್ಪಾರಪೇಟೆ ಪೊಲೀಸರು ಗುರುವಾರ ರಾತ್ರಿ ದಾಳಿ ನಡೆಸಿ 45 ಪುಸ್ತಕಗಳನ್ನು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ತುಮಕೂರಿನ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಸುರೇಶ್ ಎಂಬುವರು ಸಂಜೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಉಪ್ಪಾರಪೇಟೆ ಠಾಣೆಯ ಇನ್‌ಸ್ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಸಂಜೆ 6.40ರ ಸುಮಾರಿಗೆ ದಾಳಿ ನಡೆಸಿತು.

ವಾಲ್ಮೀಕಿ ಬೇಡ ಅಲ್ಲ ಬ್ರಾಹ್ಮಣ. ಆದರೆ, ಬೇಡರ ಜಾತಿಯಲ್ಲಿ ಬೆಳೆದಿದ್ದ. ಅವನು ಬ್ರಾಹ್ಮಣ ಜಾತಿಯವನಾಗಿದ್ದುದರಿಂದ ರಾಮಾಯಣದಂತಹ ಕೃತಿ ರಚಿಸಲು ಸಾಧ್ಯವಾಗಿತ್ತು ಎಂದು ಲೇಖಕರು ಆ ಕೃತಿಯಲ್ಲಿ ಬರೆದಿದ್ದಾರೆ.

ಕೃತಿಯಿಂದ ತಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ದೂರಿ ಎಂದು ವಾಲ್ಮೀಕಿ ಸಮುದಾಯದವರು ಪ್ರತಿಭಟನೆ ನಡೆಸಿದ್ದರಿಂದ ಸರ್ಕಾರ ಆ ಕೃತಿಯನ್ನು ಮುಟ್ಟುಗೋಲು ಹಾಕಿತ್ತು.

‘ಆ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿರುವ ಬಗ್ಗೆ ಮಾಹಿತಿ ಇರಲಿಲ್ಲ’ ಎಂದು ಮಳಿಗೆಯ ಮಾಲೀಕರು ಹೇಳಿದ್ದಾರೆ. ಕೃತಿಯ ಲೇಖಕರನ್ನು ಸಂಪರ್ಕಿಸಿ ಅವರನ್ನೂ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.