ಬ್ರಾಹ್ಮಣ ಮಹಾಸಭಾ: ಇಂದಿನಿಂದ ಸರಣಿ ಕಾರ್ಯಕ್ರಮ

7

ಬ್ರಾಹ್ಮಣ ಮಹಾಸಭಾ: ಇಂದಿನಿಂದ ಸರಣಿ ಕಾರ್ಯಕ್ರಮ

Published:
Updated:

ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾದ ಶತಮಾನೋತ್ಸವ ಅಂಗವಾಗಿ ಜಿಲ್ಲೆಯ ವಿವಿಧೆಡೆ ಆಗಸ್ಟ್‌ನಲ್ಲಿ  21 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

1918ರಲ್ಲಿ ಆರಂಭವಾದ ಜಿಲ್ಲಾ ಬ್ರಾಹ್ಮಣ ಮಹಾಸಭಾದ ದಶಮಾನೋತ್ಸವ ನಿಮಿತ್ತ ಈಗಾಗಲೇ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಜುಲೈ ತಿಂಗಳ ಅಂತ್ಯದವರೆಗೆ ಜಿಲ್ಲೆಯ ವಿವಿಧ ತಾಲ್ಲೂಕು ಸೇರಿದಂತೆ ಒಟ್ಟು 39 ಕಾರ್ಯಕ್ರಮಕೈಗೊಳ್ಳಲಾಗಿತ್ತು ಎಂದು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ನಟರಾಜ್ ಭಾಗವತ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆ. 4ರಂದು ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಸಂಜೆ 6.30ಕ್ಕೆ ಉಡುಪಿ ಆಕಾಶವಾಣಿ ಕಲಾವಿದ ಮಧೂರು ನಾರಾಯಣ ಸರಳಾಯ ಇವರಿಂದ ಭಕ್ತಿ ಸಂಗೀತ, ಆ .7 ರಂದು ಹೊಸಹಳ್ಳಿ ಗಮಕ ಭವನದಲ್ಲಿ ಸಂಜೆ 6.30ಕ್ಕೆ ಅನುಪಮ ಮಂಗಳವೇಡ ಅವರಿಂದ ನೃತ್ಯ ಸಂಜೆ, ಆ. 9ಮತ್ತು 1 ರಂದು ಶಿವಮೊಗ್ಗದ ಬ್ರಾಹ್ಮಣ ವಿದ್ಯಾರ್ಥಿನಿಲಯದಲ್ಲಿ ಸಂಜೆ 7ಕ್ಕೆ ಕ್ರಾಂತಿಕಾರಿ ಹೋರಾಟಗಾರರ ಕಥೆ, ಆ. 11ರಂದು ಶಿವಮೊಗ್ಗ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಸಂಜೆ 6.30ಕ್ಕೆ ಡಾ.ಉಷಾ ವಿ.ರಾವ್ ಮತ್ತು ವೃಂದದಿಂದ ಭರತನಾಟ್ಯ ಕಾರ್ಯಕ್ರಮವಿದೆ ಎಂದು ವಿವರ ನೀಡಿದರು.

ಆ. 12 ರಂದು ಶ್ರೀಮಾತಾ ಮಾಂಗಲ್ಯ ಮಂದಿರ ಹಾಗೂ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಬೆಳಿಗ್ಗೆ 10.30ರಿಂದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಸಂಜೆ 4 ರಿಂದ ಸೊರಬ ತಾಲ್ಲೂಕು ಮುಡಗೋಡು ಗ್ರಾಮದಲ್ಲಿ ಜಿ.ಎಸ್.ನಟೇಶ್ ರಿಂದ ಮಂಕುತಿಮ್ಮನ ಕಗ್ಗ, ಆ. 13 ರಂದು ಮಧ್ಯಾಹ್ನ 3 ರಿಂದ ಸಾಗರ ತಾಲ್ಲೂಕು ಗುಮಗೋಡು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರೀರಾಮನಿರಿಯಾನ ಪ್ರಸಂಗದ ಯಕ್ಷಗಾನ ತಾಳಮದ್ದಲೆ ಆಯೋಜಿಸಲಾಗಿದೆ ಎಂದರು.

ಆ. 16 ರಂದು ಸಂಜೆ 6.30ಕ್ಕೆ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಸುಗಮ ಸಂಗೀತ, ಆ. 18 ರಂದು ಬೆಳಿಗ್ಗೆ 10.30ಕ್ಕೆ ತೀರ್ಥಹಳ್ಳಿ ತಾಲ್ಲೂಕು ಅಲಸೆ ಗ್ರಾಮದ ಚಂಡಿಕೇಶ್ವರ ದೇವಸ್ಥಾನದಲ್ಲಿ ಸೌಂದರ್ಯ ಲಹರಿ, ಅಂದು ಸಂಜೆ 6.30ಕ್ಕೆ ಶಿವಮೊಗ್ಗ ರವೀಂದ್ರ ನಗರ ಪಸನ್ನ ಗಣಪತಿ ದೇವಾಲಯದಲ್ಲಿ ಸುಗಮ ಸಂಗೀತ ಮತ್ತು ಭಕ್ತಿಗೀತೆ, ಆ. 23 ಮತ್ತು 24ರಂದು ಬಿ.ಬಿ. ರಸ್ತೆ ಶ್ರೀ ಲಕ್ಷ್ಮಿನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಸಂಜೆ 6.30ಕ್ಕೆ ಮಂಕುತಿಮ್ಮನ ಕಗ್ಗ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಆ. 26ರಂದು ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆರಾಧನೆ ಅಂಗವಾಗಿ ದುರ್ಗಿಗುಡಿ ರಾಯರ ಮಠದಲ್ಲಿ ಸಂಜೆ 6.30ಕ್ಕೆ ರಾಯರ ಮಹಿಮೆ ಗಾಯನ, ಅಂದು ಸಂಜೆ 6.30ಕ್ಕೆ ಭದ್ರಾವತಿ ನಯನ ಆಸ್ಪತ್ರೆ ಸಭಾಂಗಣದಲ್ಲಿ ವಿಪ್ರ ಕುಟುಂಬದ ವಿತ್ತ ನಿರ್ವಹಣೆ ಕುರಿತು ಉಪನ್ಯಾಸ, ಆ. 27 ರಂದು ಶಿವಮೊಗ್ಗದ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಸಂಜೆ 6.30ಕ್ಕೆ ಸುಗಮ ಸಂಗೀತ ಹಾಗೂ ಆ. 28 ರಂದು ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಆವರಣದಲ್ಲಿ ಸಂಜೆ 6.30ರಿಂದ ಕಂಸವಧೆ ಪ್ರಸಂಗ ಕುರಿತು ಯಕ್ಷ ಕಲಾಚೇತನ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಗಾಯತ್ರಿ ಪ್ರತಿಷ್ಠಾನದ ಅಧ್ಯಕ್ಷ ಎಚ್.ವಿ. ಸುಬ್ರಮಣ್ಯ, ಮಹಾಸಭಾದ ಕಾರ್ಯದರ್ಶಿ ಬಾಲಸುಬ್ರಮಣ್ಯ, ಖಜಾಂಚಿ ವೆಂಕಟರಮಣ ಜೋಯಿಸ್, ಸೂರ್ಯ ನಾರಾಯಣ್, ಶಂಕರ ನಾರಾಯಣ್ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !