ಸೇತುವೆ ಮೇಲೆ ಬಸ್‌ ಸಂಚಾರಕ್ಕೆ ಅವಕಾಶ ನೀಡಿ

7
ಕೌಠಾ ಸೇತುವೆ ದುರಸ್ತಿಗೆ ದಲಿತ ಸಂಘರ್ಷ ಮನವಿ

ಸೇತುವೆ ಮೇಲೆ ಬಸ್‌ ಸಂಚಾರಕ್ಕೆ ಅವಕಾಶ ನೀಡಿ

Published:
Updated:
ಕೌಠಾ ಸೇತುವೆ ರಿಪೇರಿ ಕೆಲಸ ಆರಂಭಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸಂಚಾಲಕ ಧನರಾಜ ಮುಸ್ತಾಪುರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಅವರಿಗೆ ಮನವಿಪತ್ರ ಸಲ್ಲಿಸಿದರು

ಔರಾದ್: 'ಬೀದರ್-ಔರಾದ್ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಕೌಠಾ ಸೇತುವೆ ಮೇಲೆ ವಾಹನಗಳ ನಿಷೇಧಿಸಿದ್ದರಿಂದ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದು, ಈ ಸಮಸ್ಯೆ ನಿವಾರಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಅವರನ್ನು ಗುರುವಾರ ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದ ಸಮಿತಿಯ ತಾಲ್ಲೂಕು ಸಂಚಾಲಕ ಧನರಾಜ ಮುಸ್ತಾಪುರ ಅವರು ಸಮಸ್ಯೆ ನಿವಾರಣೆಗೆ ವಿಶೇಷ ಒತ್ತು ನೀಡಬೇಕು ಎಂದು ಕೋರಿದರು.

‘ಬೀದರ್ ಘಟಕದ ಬಸ್‌ಗಳು ಕೌಠಾ ಮಾರ್ಗವಾಗಿ ವಿವಿಧ ಗ್ರಾಮೀಣ ಪ್ರದೇಶಗಳಿಗೆ ಸೇವೆ ಕೊಡುತ್ತಿದ್ದವು. ಈಗ ಸೇತುವೆ ಮೇಲೆ ಬಸ್ ಸಂಚಾರ ಸ್ಥಗಿತವಾದ ಕಾರಣ ಹಲವಾರು ಗ್ರಾಮಗಳ ಜನರಿಗೆ ಸುಲಭ ಸಾರಿಗೆ ಸೌಲಭ್ಯ ಸಿಗದೆ ತೊಂದರೆಗೆ ಸಿಲುಕಿದ್ದಾರೆ. ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಶಾಲೆಗೂ ಹೋಗಲು ಆಗದೆ ಮನೆಯಲ್ಲೇ ಕೂಳಿತಿದ್ದಾರೆ' ಎಂದು ತಿಳಿಸಿದರು.

'ಬೀದರ್ ಘಟಕದ ಬಸ್‌ಗಳು ಕೌಠಾ ಸೇತುವೆ ವರೆಗೆ ಮಾತ್ರ ಬರುತ್ತಿವೆ. ಕೌಠಾ (ಕೆ)ಯಿಂದ ಸಂತಪುರ ವರೆಗಿನ ಚೆಟ್ನಾಳ, ಶೆಂಬೆಳ್ಳಿ, ಜೀಗಾರ, ಮುಸ್ತಾಪುರ ಸೇರಿದಂತೆ ವಿವಿಧ ಗ್ರಾಮಗಳ ಜನರಿಗೆ ಬೀದರ್‌ಗೆ ಹೋಗಲು ಬಸ್ ಸೌಲಭ್ಯ ಇಲ್ಲ. ಹೀಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ' ಎಂದು ತಿಳಿಸಿದರು.

'ಔರಾದ್ ಘಟಕದ ಬಸ್‌ಗಳು ಸಂತಪುರ ವಡಗಾಂವ್, ಚಾಂಬೋಳ ಮಾರ್ಗವಾಗಿ ಹೋಗುತ್ತಿವೆ. ಈ ಮಾರ್ಗದ ರಸ್ತೆ ತೀರಾ ಹದಗೆಟ್ಟಿದೆ. ಮಳೆಯಾದರೆ ಸಂಪರ್ಕ ಕಡಿದು ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ಮಾಡಬೇಕು’ ಎಂದು ಮನವಿ ಮಾಡಿದರು.

ಕೌಠಾ ಸೇತುವೆ ಮೇಲೆ ಮರಳು ಲಾರಿ ಸಂಚಾರ ನಿಷೇಧಿಸಬೇಕು. ಶಿಥಿಲಗಂಡಿರುವ ಸೇತುವೆಯ ದುರಸ್ತಿ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಬೇಕು. ಜನರ ಬೇಡಿಕೆಗೆ ಸ್ಪಂದಿಸಬೇಕು.
- ಧನರಾಜ ಮುಸ್ತಾಪುರ, ಸಂಚಾಲಕ, ದಲಿತ ಸಂಘರ್ಷ ಸಮಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !