ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿದ ಗಜ್ಜರಿ, ಅರಳಿದ ಹೂಕೋಸು

ಕೆ.ಜಿಗೆ ₹ 80ರಿಂದ ₹ 120ಕ್ಕೆ ಜಿಗಿದ ಬೀನ್ಸ್‌
Last Updated 15 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಬೀದರ್: ಬಿರು ಬೇಸಿಗೆಯಲ್ಲಿ ಮದುವೆ ಸಮಾರಂಭಗಳು ಜೋರಾಗಿಯೇ ನಡೆದಿವೆ. ಬಿಸಿಲಿನ ಕಾರಣ ವಧು, ವರನ ಕಡೆಯವರು ಬೆಳಿಗ್ಗೆಯೇ ಶಾಸ್ತ್ರೋಕ್ತವಾಗಿ ಮದುವೆ ಸಂಪ್ರದಾಯಗಳನ್ನು ಮುಗಿಸಿಕೊಂಡು ಸಂಜೆ ವೇಳೆಗೆ ಅಕ್ಷತೆ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.

ಮದುವೆ ಸಮಾರಂಭಗಳು ನಿರಂತರವಾಗಿ ನಡೆದಿರುವ ಕಾರಣ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೆಲ ತರಕಾರಿ ಬೆಲೆಯಲ್ಲೂ ಏರಿಕೆಯಾಗಿದೆ. ಜನ ಅನ್ನ, ಸಾರಿಗಿಂತಲೂ ಪುಲಾವ್‌ ಸೇವಿಸಲು ಹೆಚ್ಚು ಇಷ್ಟ ಪಡುತ್ತಿದ್ದಾರೆ. ಹೀಗಾಗಿ ಗಜ್ಜರಿ, ಬೀನ್ಸ್, ಹೂಕೋಸು, ಬೆಳ್ಳುಳ್ಳಿ. ಕರಿಬೇವು, ಕೊತಂಬರಿಗೆ ಹೆಚ್ಚಿನ ಬೇಡಿಕೆ ಬಂದಿದೆ.

ಬೀನ್ಸ್ ಪ್ರತಿ ಕೆ.ಜಿಗೆ ₹ 120ಕ್ಕೆ ಏರಿದರೆ, ಹಿರೇಕಾಯಿ, ಬೆಂಡೆಕಾಯಿ ಹಾಗೂ ಗಜ್ಜರಿ ಪ್ರತಿ ಕೆ.ಜಿಗೆ. 80ರಂತೆ ಮಾರಾಟವಾಗುತ್ತಿದೆ. ಮದುವೆ ಕಾವಿನಲ್ಲಿ ದೇಹದ ಕಾವು ಏರಿಸುವುದು ಸರಿಯಲ್ಲವೆಂದು ನುಗ್ಗೆಕಾಯಿ ತನ್ನ ಬೆಲೆ ಇಳಿಸಿಕೊಂಡಿದೆ. ಇದಕ್ಕೆ ಪೂರಕವಾಗಿ ಈರುಳ್ಳಿ ಸ್ಥಿರತೆ ಕಾಯ್ದುಕೊಂಡಿದೆ.

ಗಜ್ಜರಿ, ಬೀನ್ಸ್ ಬೆಲೆ ಪ್ರತಿಕ್ವಿಂಟಲ್‌ಗೆ ₹ 4 ಸಾವಿರ, ಹೂಕೋಸು, ತುಪ್ಪದ ಹಿರೇಕಾಯಿ, ಮೆಂತೆ ಬೆಲೆ ₹ 2 ಸಾವಿರ, ಬೆಳ್ಳುಳ್ಳಿ, ಕರಿಬೇವು, ಕೊತಂಬರಿ ಬೆಲೆ ₹ 1ಸಾವಿರ ಹೆಚ್ಚಾಗಿದೆ. ನುಗ್ಗೆಕಾಯಿ, ಡೊಣಮೆಣಸಿನ ಕಾಯಿ ಹಾಗೂ ಪಾಲಕ್ ಬೆಲೆ ಪ್ರತಿ ಕ್ವಿಂಟಲ್‌ಗೆ ₹1ಸಾವಿರ ಕಡಿಮೆಯಾಗಿದೆ.

ಈರುಳ್ಳಿ. ಆಲೂಗಡ್ಡೆ, ಮೆಣಸಿನಕಾಯಿ, ಎಲೆಕೋಸು, ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ಹಿರೇಕಾಯಿ, ಚವಳೆಕಾಯಿ, ಸೌತೆಕಾಯಿ ಬೆಲೆ ಸ್ಥಿರವಾಗಿದೆ.

ನೆರೆಯ ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗಿದೆ. ಹೈದರಾಬಾದ್‌ನಿಂದ ಬೀನ್ಸ್, ಗಜ್ಜರಿ, ನುಗ್ಗೆಕಾಯಿ, ಬೀಟ್‌ರೂಟ್‌, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಬೆಂಡೆಕಾಯಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ ಬಂದರೆ, ಬೆಳಗಾವಿಯಿಂದ ಹಸಿ ಮೆಣಸಿನಕಾಯಿ ಹಾಗೂ ಕೊತಂಬರಿ ಆವಕವಾಗಿದೆ.

‘ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಹೋಬಳಿ ಪ್ರದೇಶ ಹಾಗೂ ಚಿಟಗುಪ್ಪ ತಾಲ್ಲೂಕಿನಿಂದ ಬದನೆಕಾಯಿ, ಹೂಕೋಸು, ಮೆಂತೆ ಹಾಗೂ ಪುಂಡಿ ಸೊಪ್ಪು ಮಾರುಕಟ್ಟೆಗೆ ಬಂದಿದೆ. ಬಿಸಿಲು ಹೆಚ್ಚುತ್ತಿರುವ ಕಾರಣ ತರಕಾರಿ ಬೆಲೆ ಸಹ ಹೆಚ್ಚಾಗುತ್ತಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

.....................................................................

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ;ಕಳೆದ ವಾರ; ಈ ವಾರ (ಪ್ರತಿ ಕೆ.ಜಿಗೆ ₹ಗಳಲ್ಲಿ)

.......................................................................


ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ, ಈ ವಾರ
.......................................................................
ಈರುಳ್ಳಿ 5-10; 5-10
ಬೆಳ್ಳುಳ್ಳಿ 30-40; 40-50
ಆಲೂಗಡ್ಡೆ 20-30;20-30
ಮೆಣಸಿನಕಾಯಿ 60-80;60-80
ಎಲೆಕೋಸು 20-30;20-30
ಹೂಕೋಸು 30-40;50-60
ಗಜ್ಜರಿ 30-40;60-80
ಬೀನ್ಸ್ 60-80;100-120
ಟೊಮೆಟೊ 20-30; 20-30

ಬದನೆಕಾಯಿ 20-30; 20-30
ಬೆಂಡೆಕಾಯಿ 50-60; 60-80
ಹಿರೇಕಾಯಿ 60-80; 60-80
ನುಗ್ಗೆಕಾಯಿ 40-50; 30-40

ಡೊಣಮೆಣಸಿನ ಕಾಯಿ 50-60; 40-50
ಚವಳೆಕಾಯಿ 60-80; 60-80
ಸೌತೆಕಾಯಿ 20-30; 20-30,
ತುಪ್ಪದ ಹಿರೇಕಾಯಿ 50-60; 60-80

ಮೆಂತೆ 50-60; 60-80
ಸಬ್ಬಸಗಿ 60-80; 60-80
ಕರಿಬೇವು 30-40; 40-50
ಕೊತಂಬರಿ 10-20; 20-30
ಪಾಲಕ್ 30-40; 20-30

* * * *

ಪೇಟೆ ಧಾರಣಿ
(ಪ್ರತಿ ಕ್ವಿಂಟಲ್‌– ಕನಿಷ್ಠ– ಗರಿಷ್ಠ ₹ ಗಳಲ್ಲಿ)
.....................................................
ಕಡಲೆ ಕಾಳು – 4,015 ; 4,915
ಜೋಳ 3,000 ; 4,550
ನುಚ್ಚು ಅಕ್ಕಿ 2,400 ; 2,800

ಅಕ್ಕಿ 4,400 ; 6,000
ಸೋಯಾಬಿನ್ 4,700 ; 5,200
ಗೋಧಿ 2,000 ; 3,200
ಕುಸುಬೆ 3,900 ; 4,500
ತೊಗರಿ 5,000 ; 8,600

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT