ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಮನೆ ಶಿಥಿಲಗೊಂಡರೆ ಕಾಳಜಿಕೇಂದ್ರ ಆಸರೆ

ಶಾಸಕ ಶರಣು ಸಲಗರ ಹೇಳಿಕೆ
Last Updated 25 ಜುಲೈ 2021, 3:17 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಯಾರದ್ದಾದರೂ ಮನೆ ಶಿಥಿಲಗೊಂಡು ಮಳೆಯ ಕಾರಣ ಕುಸಿಯುವ ಭಯವಿದ್ದರೆ ಕಾಳಜಿ ಕೇಂದ್ರದಲ್ಲಿ ಆಸರೆ ಪಡೆಯಬಹುದು’ ಎಂದು ಶಾಸಕ ಶರಣು ಸಲಗರ ಹೇಳಿದರು.

ನಗರದ ನಾರಾಯಣಪುರ ರಸ್ತೆಯಲ್ಲಿನ ವಿದ್ಯಾರ್ಥಿ ನಿಲಯ ಕಟ್ಟಡದಲ್ಲಿ ಶನಿವಾರ ಕಾಳಜಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಳೆಯಿಂದ ಮನೆ ಕುಸಿದು ಅಪಾಯ ಸಂಭವಿಸುತ್ತಿದೆ. ಅಲ್ಲದೆ ಅಂಥವರಿಗೆ ವಾಸಿಸುವುದಕ್ಕೆ ಮನೆ ಇಲ್ಲದಂತಾಗುತ್ತಿದೆ. ಆದ್ದರಿಂದ ಸರ್ಕಾರ ಕಾಳಜಿ ಕೇಂದ್ರ ಆರಂಭಿಸಲು ಸೂಚಿಸಿದೆ. ನಿರ್ಗತಿಕರು, ಬಡವರು ಮಳೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದರೆ ಈ ಸುರಕ್ಷಿತ ಸ್ಥಳಕ್ಕೆ ಬಂದು ಉಳಿದುಕೊಳ್ಳಬಹುದು. ಅಂಥವರನ್ನು ಇತರರು ಕೂಡ ಇಲ್ಲಿಗೆ ಕಳುಹಿಸಿಕೊಟ್ಟು ಸಂಕಟದಲ್ಲಿ ಸಹಾಯ ಒದಗಿಸಬೇಕು’ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ನಾಹೇದಾ ಸುಲ್ತಾನಾ, ಆಯುಕ್ತ ಶಿವಕುಮಾರ, ತಹಶೀಲ್ದಾರ್ ಸಾವಿತ್ರಿ ಸಲಗರ, ದೀಪಕ ಗಾಯಕವಾಡ, ರಾಮಭಾವು ಜಾಧವ, ಅಶೋಕ ವಕಾರೆ, ರತಿಕಾಂತ ಕೊಹಿನೂರ, ದಿಗಂಬರ ಜಲ್ದೆ, ರಹೀಮಸಾಬ್ ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT