ಬೀದರ್: ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಸಾಧನೆಗೆ ತಪಸ್ಸು ಮಾಡುವುದಕ್ಕಿಂತ ಪ್ರಕೃತಿಯ ಮಡಿಲಲ್ಲಿರುವ ಸಕಲ ಜೀವಿಗಳ ಸಹಜಭಾವನೆ ಅರ್ಥಮಾಡಿಕೊಳ್ಳಬೇಕು ಎಂದು ಎಂದು ಕಲಬುರಗಿಯ ನೇತ್ರ ತಜ್ಞೆ ಡಾ.ರಾಜಶ್ರೀ ಹೇಳಿದರು.

ಹಾಲಹಳ್ಳಿ ಸಮೀಪದ ಸಂಗಮೇಶ್ವರ ಕೊಳ್ಳದಲ್ಲಿ ಸಿದ್ದಾರಡ್ಡಿ ಫೌಂಡೇಷನ್ ಹಾಗೂ ಬಸವ ಬಾಂಧವ್ಯ ಬಳಗದ ವತಿಯಿಂದ ಆಯೋಜಿಸಿದ್ದ ವನಸಿರಿ ಸಮಾಗಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಳಗದ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಟಂಕಸಾಲೆ ಮಾತನಾಡಿ, ದಾಂಪತ್ಯ ಗಟ್ಟಿಯಾಗಿರಲು ಬೇಕಾದ ಮೂಲ ವಿಚಾರಗಳ ವಿನಿಮಯ ಪ್ರತಿ ತಿಂಗಳು ನಡೆಯುತ್ತವೆ ಎಂದು ತಿಳಿಸಿದರು.

ಸಮಾಗಮದಲ್ಲಿ ಮೊದಲಿಗೆ ವಿಶಿಷ್ಟ ರೀತಿಯಲ್ಲಿ ಪರಸ್ಪರ ಪರಿಚಯ ಮಾಡಿಕೊಳ್ಳಲಾಯಿತು. ವನವಿದ್ಯಾಸಂಕೇತ ಮೂಲಕ ಚಾರಣ ಹೊರಡಲಾಯಿತು.

ಕಲಬುರಗಿಯ ರಾಜು ಹೆಬ್ಬಾಳ ಅವರು ಕುಟ್ಟುವ–ಬೀಸುವ ಜೋಗುಳ, ಹಂತಿಪದ, ಲಾವಣಿ ಮತ್ತು ಅನೇಕ ಒಗಟು ಹೇಳುವ ಮೂಲಕ ರಂಜಿಸಿದರು. ಮಕ್ಕಳಿಗಾಗಿ ಜೋಕಾಲಿ, ಮಂಕಿಬ್ರಿಜ್, ಬಲೂನ್ ಆಟದ ಮೂಲಕ ಬಾಬುರಾವ್ ನಿಂಬೂರೆ ಸಾಹಸಮಯ ಚಟುವಟಿಕೆ ಮಾಡಿಸಿದರು. ನಾಗರತ್ನಾ ಪಾಟಿಲ ಮಹಿಳೆಯರಿಗೆ ನೀರು ತುಂಬುವ ಸ್ಪರ್ಧೆ, ಮಕ್ಕಳಿಗೆ ಜಲಕ್ರೀಡೆ ಆಯೋಜಿಸಿದ್ದರು.

ಡಾ.ಗುರಮ್ಮ ಸಿದಾರಡ್ಡಿ, ಪ್ರೊ. ಲೀಲಾವತಿ ಚಕೋತೆ, ಆಣದೂರ ಗ್ರಾಮ ಪಂಚಾಯಿತಿ ಅದ್ಯಕ್ಷ ಶ್ರೀನಿವಾಸರಡ್ಡಿ, ವಕೀಲ ಜಗನಾಥ, ನಾಟಿವೈದ್ಯ ಸಿದ್ರಾಮಪ್ಪ, ಎಫ್ಪಿಎಐ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಹಾಗೂ ಡಾ.ವೈಶಾಲಿ ಇದ್ದರು.

ವಿಜಯ ವಡ್ಡಿ ಸ್ವಾಗತಿಸಿದರು. ನೀಲಾಂಬಿಕಾ ಸಿಂದಬಂದಗಿ ಪ್ರಾರ್ಥನೆ ಮಾಡಿದರು. ಆಕಾಶ ಕೋಟೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.