ಶನಿವಾರ, ಮೇ 8, 2021
18 °C

‘ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ‘ಕ್ಷೇತ್ರದಲ್ಲಿ ನಡೆಯಲಿರುವ ಪ್ರತಿಯೊಂದು ಅಭಿವೃದ್ದಿ ಕಾಮಗಾರಿಯೂ ಗುಣಮಟ್ಟದಿಂದ ಕೂಡಿರಬೇಕು’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಲೋಕಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯಿಂದ ಕೈಗೊಳ್ಳಲಿರುವ ಸಿಸಿ ರಸ್ತೆ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪಟ್ಟಣದ ಎನ್‍ಎಚ್–65 ರಿಂದ ತೋಟಗಾರಿಕೆ ಇಲಾಖೆವರೆಗೆ ₹40 ಲಕ್ಷದ ಸಿಸಿ ರಸ್ತೆ, ರಾಷ್ಟ್ರೀಯ ಹೆದ್ದಾರಿ 50 ರಿಂದ ಹಳೆ ತಹಶೀಲ್ದಾರ್ ಕಚೇರಿಯವರೆಗೆ ₹55 ಲಕ್ಷದ ಸಿಸಿ ರಸ್ತೆ, ಹಾಗೂ ಕಲ್ಲೂರ ರಸ್ತೆಯಿಂದ ಪುರಸಭೆವರೆಗೆ ₹25 ಲಕ್ಷದ ಸಿಸಿ ರಸ್ತೆ, ಮತ್ತು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ₹40 ಲಕ್ಷ ಸಿಸಿ ಕಾಮಗಾರಿಗ ಳಿಗೆ ಇಂದು ಚಾಲನೆ ನೀಡಲಾಗಿದೆ ಎಂದರು.

ಪಟ್ಟಣದಲ್ಲಿ ನಡೆಯಲಿರುವ ಕಾಮಗಾರಿಗಳನ್ನು ಪುರಸಭೆ ಸದಸ್ಯರು ಸಾರ್ವಜನಿಕರು ವೀಕ್ಷಿಸಿ ಉತ್ತಮ ಗುಣಮಟ್ಟದಿಂದ ಆಗುವಂತೆ ನೋಡಿಕೊಂಡು ಆಗಿರುವ ಅಭಿವೃದ್ದಿ ಕಾಮಗಾರಿಗಳು ಹಾಳಾಗದಂತೆ 5 ವರ್ಷಗಳ ಕಾಲಬಾಳುವ ಹಾಗೆ ನೋಡಿಕೊಂಡು ಬರಬೇಕು ಎಂದರು.

ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ವಾಂಜರಿ ಬಡಾವಣೆವರೆಗೆ ₹1.6 ಕೋಟಿಯ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಹಾಗೂ 14ನೇ ಹಣಕಾಸು ಯೋಜನೆ ಅಡಿಯಲ್ಲಿ ₹3 ಕೋಟಿ ಮತ್ತು ಎಸ್‍ಎಫ್‍ಸಿ ಯೋಜನೆ ಅಡಿಯಲ್ಲಿ ₹2 ಕೋಟಿ ಅನುದಾನ ನೀಡಲಾಗಿದೆ ಎಂದರು.

ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ರಮೇಶ ಡಾಕುಳಗಿ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ, ತಾ.ಪಂ. ಇಒ ವೈಜಿನಾಥ ಫುಲೆ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಬಿಇಒ ಶಿವರಾಚಪ್ಪ ವಾಲಿ, ಸಹಾಯಕ ಅಭಿಯಂತರ ರಾಜಕುಮಾರ ಕಲಬುರ್ಗಿ, ಪುರಸಭೆ ಸದಸ್ಯರಾದ ಅಫ್ಸರ ಮಿಯ್ಯ, ಸುನೀಲ ಪಾಟೀಲ, ವಿಜಯಕುಮಾತ ಭಾಸಪಳ್ಳಿ, ವಿಜಯಕುಮಾರ ದುರ್ಗದ, ರಮೇಶ ಕಲ್ಲೂರು, ಮಲ್ಲಿಕಾರ್ಜುನ ಶರ್ಮಾ, ಅನಿಲ್ ಪಲ್ಲೆರಿ, ಅಶೋಕ ಸೊಂಡೆ, ಗುಂಡಪ್ಪಾ ಹೊನ್ನಿಕೇರಿ, ಮಹೇಶ ಪಾಟೀಲ, ಬಸವರಾಜ ಶೇರಿಕಾರ, ವಿನಾಯ ಯಾಧವ, ರಾಜಪ್ಪ ಇಟಗಿ, ಮಲ್ಲಿಕಾರ್ಜುನ ಮಾಶಟ್ಟಿ ಹಾಗೂ ಬಾಬುರಾವ ಪರಮಶೆಟ್ಟಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು