ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ: ವಾಹನ ಸವಾರರಿಗೆ ಕಂದಕಗಳ ಕಂಟಕ!

ಭಾಲ್ಕಿ–ಹುಮನಾಬಾದ್ ರಸ್ತೆ ಸೇರಿ ವಿವಿಧೆಡೆ ಕಂದಕಗಳ ಸೃಷ್ಟಿ; ಮುಚ್ಚಲು ನಾಗರಿಕರ ಆಗ್ರಹ
Published 11 ಜೂನ್ 2024, 6:54 IST
Last Updated 11 ಜೂನ್ 2024, 6:54 IST
ಅಕ್ಷರ ಗಾತ್ರ

ಭಾಲ್ಕಿ: ಇಲ್ಲಿನ ಭಾಲ್ಕಿ–ಹುಮನಾಬಾದ್ ರಾಜ್ಯ ಹೆದ್ದಾರಿಯ ಬಿಕೆಐಟಿ ಕಾಲೇಜು ಸಮೀಪದ ಸೇತುವೆ ಬಳಿ, ಪೆಟ್ರೋಲ್ ಬಂಕ್ ರಸ್ತೆ ಪಕ್ಕ ಹಾಗೂ ಉಪನ್ಯಾಸಕರ ಬಡಾವಣೆ ಭಾರತ್ ಪಬ್ಲಿಕ್ ಸ್ಕೂಲ್ ಸಮೀಪದ ಸೇತುವೆ ಬಳಿ ಡಾಂಬರ್‌ ರಸ್ತೆ ಕುಸಿದಿದ್ದು, ಆಳವಾದ ಕಂದಕಗಳು ಸೃಷ್ಟಿಯಾಗಿವೆ. ವಾಹನ ಸವಾರರು ನಿತ್ಯ ಅಪಾಯದ ಭೀತಿಯಲ್ಲಿಯೇ ಸಂಚಾರ ನಡೆಸಬೇಕಿದೆ.

ಭಾಲ್ಕಿ–ಹುಮನಾಬಾದ್ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯ ವಾಹನಗಳು ಸಂಚರಿಸುತ್ತವೆ. ರಸ್ತೆ ಹಾಗೂ ಸೇತುವೆ ಬದಿಗಳಲ್ಲಿ ಮೂರರಿಂದ ಎಂಟು ಅಡಿ ಆಳದವರೆಗೆ ಕಂದಕಗಳು ಸೃಷ್ಟಿಯಾಗಿವೆ. ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೆ ಇಲ್ಲಿ ಅಪಾಯ ಕಟ್ಟಿಟ್ಟಬುತ್ತಿ. ರಾತ್ರಿ ಸಮಯದಲ್ಲಿ ಸವಾರರು ಈ ಕಂದಕಗಳಲ್ಲಿ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಪುರಸಭೆ ಸದಸ್ಯ ಪಾಂಡುರಂಗ ಕನಸೆ ಸೇರಿ ವಾಹನ ಚಾಲಕರು  ಆತಂಕ ವ್ಯಕ್ತಪಡಿಸಿದರು.

ಈಗ ಮಳೆಗಾಲ ಆರಂಭವಾಗಿದ್ದು, ಹೆಚ್ಚು ಮಳೆ ಸುರಿದು ಎಲ್ಲೆಡೆ ನೀರು ಸಂಗ್ರಹವಾದಾಗ ಯಾವುದು ರಸ್ತೆ, ಕಂದಕ ಎನ್ನುವ ವ್ಯತ್ಯಾಸವೇ ವಾಹನ ಸವಾರರಿಗೆ ಗೊತ್ತಾಗುವುದಿಲ್ಲ. ಇದು ನಮ್ಮ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೆಸರು ಹೇಳಲಿಚ್ಛಿಸದ ವಾಹನ ಸವಾರ ತನ್ನ ಅಳಲು ತೋಡಿಕೊಂಡರು.

ಪಟ್ಟಣದ ಮಹಾತ್ಮ ಗಾಂಧಿ ರಸ್ತೆಯಿಂದ ಉಪನ್ಯಾಸಕರ ಬಡಾವಣೆ ಮಾರ್ಗವಾಗಿ ಹುಮನಾಬಾದ್ ರಸ್ತೆಗೆ ಸಂಪರ್ಕ ಕಲ್ಪಿಸುವ ಸೇತುವೆ ಬಳಿ (ಭಾರತ್ ಪಬ್ಲಿಕ್ ಸ್ಕೂಲ್ ಸಮೀಪ) ಕಂದಕ ನಿರ್ಮಾಣ ಆಗಿದ್ದು, ಈ ಮಾರ್ಗವಾಗಿ ಸಂಚರಿಸುವ, ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳು ಸೇರಿ ಇತರೆ ವಾಹನ ಸವಾರರ ಜೀವಕ್ಕೆ ಆಪತ್ತು ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕಂದಕಗಳನ್ನು ಮುಚ್ಚಬೇಕು. ಚಿಕ್ಕ ಸೇತುವೆಯ ಎತ್ತರವನ್ನು ಹೆಚ್ಚಿಸಬೇಕು ಎಂದು ಪಟ್ಟಣ ನಿವಾಸಿಗಳು ಒತ್ತಾಯಿಸಿದ್ದಾರೆ.

ಭಾಲ್ಕಿ ಉಪನ್ಯಾಸಕರ ಮಾರ್ಗದ ರಸ್ತೆಯಲ್ಲಿರುವ ಸೇತುವೆ ಪಕ್ಕ ಕಂದಕ ನಿರ್ಮಾಣ ಆಗಿರುವುದು
ಭಾಲ್ಕಿ ಉಪನ್ಯಾಸಕರ ಮಾರ್ಗದ ರಸ್ತೆಯಲ್ಲಿರುವ ಸೇತುವೆ ಪಕ್ಕ ಕಂದಕ ನಿರ್ಮಾಣ ಆಗಿರುವುದು
ಭಾಲ್ಕಿ- ಹುಮನಾಬಾದ್ ರಸ್ತೆಯ ಬಿಕೆಐಟಿ ಸಮೀಪದ ರಸ್ತೆ ಪಕ್ಕ ಕಂದಕ ನಿರ್ಮಾಣ ಆಗಿರುವುದು
ಭಾಲ್ಕಿ- ಹುಮನಾಬಾದ್ ರಸ್ತೆಯ ಬಿಕೆಐಟಿ ಸಮೀಪದ ರಸ್ತೆ ಪಕ್ಕ ಕಂದಕ ನಿರ್ಮಾಣ ಆಗಿರುವುದು
ಭಾಲ್ಕಿ- ಹುಮನಾಬಾದ್ ರಸ್ತೆಯ ಬಿಕೆಐಟಿ ಸೇತುವೆ ಪಕ್ಕ ರಸ್ತೆ ಕುಸಿದು ಕಂದಕ ನಿರ್ಮಾಣ ಆಗಿರುವುದು
ಭಾಲ್ಕಿ- ಹುಮನಾಬಾದ್ ರಸ್ತೆಯ ಬಿಕೆಐಟಿ ಸೇತುವೆ ಪಕ್ಕ ರಸ್ತೆ ಕುಸಿದು ಕಂದಕ ನಿರ್ಮಾಣ ಆಗಿರುವುದು

ರಸ್ತೆಗಳ ಸೇತುವೆ ಪಕ್ಕ ನಿರ್ಮಾಣಗೊಂಡಿರುವ ಕಂದಕಣದಿಂದ ವಾಹನ ಸವಾರರ ಜೀವಕ್ಕೆ ಕುತ್ತು ಬಂದಿದೆ. ಸಂಬಂಧಪಟ್ಟವರು ತುರ್ತು ಗಮನ ಹರಿಸಬೇಕು. ಪಾಂಡುರಂಗ ಕನಸೆ ಪುರಸಭೆ ಸದಸ್ಯ ಪಟ್ಟಣದ ಬಿಕೆಐಟಿ ಕಾಲೇಜು ಸಮೀಪದ ಸೇತುವೆ ಪಕ್ಕ ಪೆಟ್ರೋಲ್ ಬಂಕ್ ಸಮೀಪದ ರಸ್ತೆ ಕಟ್ ಆಗಿ ಸೃಷ್ಟಿಯಾಗಿರುವ ಕಂದಕವನ್ನು ಮುರಮ್‌ನಿಂದ ಮುಚ್ಚಲಾಗುವುದು.

ಅಲ್ತಾಫ್ ಪಿಡಬ್ಲ್ಯುಡಿ ಎಇಇ ಪಟ್ಟಣದ ಉಪನ್ಯಾಸಕರ ಬಡಾವಣೆ ಮಾರ್ಗದ ರಸ್ತೆಯಲ್ಲಿರುವ ಸೇತುವೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗುವುದು. ಸಂಗಮೇಶ ಕಾರಬಾರಿ ಪುರಸಭೆ ಮುಖ್ಯಾಧಿಕಾರಿ ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಅಮಾಯಕ ವಾಹನ ಸವಾರರಿಗೆ ಅನಾಹುತವಾದಲ್ಲಿ ಅದಕ್ಕೆ ಯಾರು ಜವಾಬ್ದಾರಿ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸಚಿನ್ ಜಾಧವ್ ಪಟ್ಟಣದ ವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT