ಭಾನುವಾರ, ಆಗಸ್ಟ್ 1, 2021
26 °C
ಇನ್ನೂ ಬರಬೇಕಿದೆ 3,118 ಜನರ ವೈದ್ಯಕೀಯ ವರದಿ

ಬೀದರ್‌ನಲ್ಲಿ ಮತ್ತೆ 15 ಮಂದಿಗೆ ಕೋವಿಡ್‌ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಗುರುವಾರ ಮತ್ತೆ 15 ಜನರಿಗೆ ಕೋವಿಡ್‌- 19 ತಗುಲಿದೆ.  ಕೋವಿಡ್  ಪೀಡಿತರ ಸಂಖ್ಯೆ 894ಕ್ಕೆ ತಲುಪಿದೆ.

ಬೀದರ್‌ ತಾಲ್ಲೂಕಿನ 14 ವರ್ಷದ ಬಾಲಕಿ, 47, 68. ವರ್ಷದ ಪುರುಷ, 85, 48, 35 ವರ್ಷದ ಮಹಿಳೆ, 19 ವರ್ಷದ ಯುವತಿಗೆ ಹಾಗೂ ಔರಾದ್‌ ತಾಲ್ಲೂಕಿನ 46 ವರ್ಷದ ಪುರುಷನಿಗೆ ಕೋವಿಡ್ ದೃಢಪಟ್ಟಿದೆ.

ಹುಮನಾಬಾದ್‌ ತಾಲ್ಲೂಕಿನ 14 ವರ್ಷದ ಬಾಲಕ, 17 ವರ್ಷದ ಯುವಕ, 27,35 ವರ್ಷದ ಮಹಿಳೆ ಹಾಗೂ 36 ವರ್ಷದ ಪುರುಷನಿಗೆ, ಭಾಲ್ಕಿ ತಾಲ್ಲೂಕಿನ 44 ಹಾಗೂ 31 ವರ್ಷದ ಮಹಿಳೆಗೆ ಕೋವಿಡ್‌ ತಗುಲಿದೆ.

ಗುರುವಾರವೂ ಜಿಲ್ಲೆಯಲ್ಲಿ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಬೀದರ್‌ ಹಾಗೂ ಔರಾದ್‌ ತಾಲ್ಲೂಕಿನಲ್ಲಿ ಮೃತಪಟ್ಟ ಒಟ್ಟು ಇಬ್ಬರ ವೈದ್ಯಕೀಯ ವರದಿ ಪ್ರಕಟವಾಗಬೇಕಿದೆ. 3,118 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ಬರಬೇಕಿದೆ.

ಜಿಲ್ಲೆಯಲ್ಲಿ ಈವರೆಗೆ 41,839 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಇವರಲ್ಲಿ 3,7827 ಮಂದಿಯ ವೈದ್ಯಕೀಯ ವರದಿ ನೆಗೆಟಿವ್ ಹಾಗೂ 894 ಪಾಸಿಟಿವ್‌ ಬಂದಿವೆ.

562 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.