ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ: ಕಲಬೆರಿಕೆ ಹಾಲು ವಿಷಕ್ಕೆ ಸಮಾನ

ಗುಣಮಟ್ಟದ ಹಾಲು ಉತ್ಪಾದನೆ ತರಬೇತಿಯಲ್ಲಿ ಪಾಂಡುರಂಗ ಪಾಟೀಲ ಅಭಿಮತ
Last Updated 18 ಫೆಬ್ರುವರಿ 2022, 13:03 IST
ಅಕ್ಷರ ಗಾತ್ರ

ಜನವಾಡ: ಕಲಬೆರಿಕೆ ಹಾಲು ವಿಷಕ್ಕೆ ಸಮಾನ ಎಂದು ಕರ್ನಾಟಕ ಹಾಲು ಮಹಾಮಂಡಲದ ಬೀದರ್‍ನ ವ್ಯವಸ್ಥಾಪಕ ಡಾ. ಪಾಂಡುರಂಗ ಪಾಟೀಲ ಹೇಳಿದರು.

ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಗುಣಮಟ್ಟದ ಹಾಲು ಉತ್ಪಾದನೆ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ಈಚಿನ ದಿನಗಳಲ್ಲಿ ಆಹಾರಗಳಲ್ಲಿ ಕಲಬೆರಿಕೆ ಹೆಚ್ಚಾಗಿದೆ. ಹಾಲು ಕೂಡ ಇದಕ್ಕೆ ಹೊರತಾಗಿಲ್ಲ. ಹಾಲಿನಲ್ಲಿ ಕಲಬೆರಿಕೆ ತಡೆಗಟ್ಟುವಲ್ಲಿ ರೈತರೊಂದಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿ ಹಾಗೂ ವಿಸ್ತರಣಾ ಅಧಿಕಾರಿಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಹೇಳಿದರು.

ಕಲಬುರ್ಗಿಯ ಹೈನು ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ದೇವರಾಜು ಆರ್ ಮಾತನಾಡಿ, ದೇಶ ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಗುಣಮಟ್ಟದಲ್ಲೂ ಪ್ರಥಮ ಸ್ಥಾನ ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ಮಾತನಾಡಿ, ಸದ್ಯ ಸಾತ್ವಿಕ ಆಹಾರಕ್ಕೆ ಬೇಡಿಕೆ ಹೆಚ್ಚಾಗಿದೆ. ಹಾಲು ಸಂಪೂರ್ಣ ಸಮತೋಲನ ಆಹಾರವಾಗಿದೆ ಎಂದು ಹೇಳಿದರು.

ಕರ್ನಾಟಕ ಹಾಲು ಮಹಾ ಮಂಡಲದ ಸಹಾಯಕ ವ್ಯವಸ್ಥಾಪಕ ಶ್ರೀನಿವಾಸರಾವ್ ಮಾತನಾಡಿದರು. ಪ್ರಿಯಾಂಕಾ ಕಲ್ಯಾಣ, ಮಧುಸೂಧನ್, ಬಸವಭಾರತಿ ಅವರು ಹೈನುಗಾರಿಕೆ ಹಾಗೂ ಹಾಲಿಗೆ ಸಂಬಂಧಿಸಿದಂತೆ ವಿಷಯ ಮಂಡಿಸಿದರು.
ಪಶು ವಿಜ್ಞಾನಿ ಡಾ.ಅಕ್ಷಯಕುಮಾರ ಸ್ವಾಗತಿಸಿದರು. ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT